ದಾಂಡೇಲಿ : ತಾಲೂಕಿನ ಕೆರವಾಡದಲ್ಲಿರುವ ಶ್ರೇಯಸ್ ಮತ್ತು ಶ್ರೀನಿಧಿ ಪೇಪರ್ ಮಿಲ್ ಕಾರ್ಮಿಕನೋರ್ವ ಕೆಲಸ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಬಸವೇಶ್ವರ ನಗರದ ಗಣೇಶ ವಿ. ವಾಳೆ ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಈತ ಎಂದಿನಂತೆ ಕಂಪನಿಯ ಕೆಲಸಕ್ಕೆ ಹೋಗಿದ್ದಾತ ಅಸುನೀಗಿದ್ದಾರೆ. ಮೃತರು ತಾಯಿ, ಮಡದಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಗಣೇಶ ವಾಳೆ ಕಳೆದ ಹತ್ತು ಹದಿನೈದು ವರ್ಷಗಳಿಂದ ಇದೇ ಕಂಪನಿಯಲ್ಲಿ
ಕೆಲಸ ಮಾಡುತ್ತಿದ್ದರು.
ಮೃತ ಗಣೇಶ ವಾಳೆಯ ಮರಣೋತ್ತರ ಪರೀಕ್ಷೆಯನ್ನು ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಯಿತು. ಆದರೆ ಕುಟುಂಬಸ್ಥರು ಹಾಗೂ ಕಾರ್ಮಿಕರು ಶವವನ್ನು ಸಾಗಿಸದೆ
ಮೃತ ಕಾರ್ಮಿಕನ ಕುಟುಂಬಕ್ಕೆ ನ್ಯಾಯ ಕೇಳಿ
ಪ್ರತಿಭಟಿಸಿದ ಘಟನೆಯೂ ನಡೆದಿದೆ. ಕಂಪನಿಯ ಮಾಲಕ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದ ಕಾರ್ಮಿಕರು, ಪರಿಹಾರಕ್ಕಾಗಿ ಒತ್ತಾಯಿಸಿದರು ಎನ್ನಲಾಗಿದೆ.