ಭಟ್ಕಳ: ಆಕಸ್ಮಿಕವಾಗಿ ಕಾಲುಜಾರಿ ತೆರೆದ ಬಾವಿಗೆ ಬಿದ್ದಿದ್ದ ಕೋಣವೊಂದನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಹೊನ್ನೆಗದ್ದೆ ವರಕೊಡ್ಲುನಲ್ಲಿ ನಡೆದಿದೆ. 26 ಅಡಿ ಆಳದ ನೀರು ತುಂಬಿದ ಬಾವಿಗೆ ಒಂದು ಟನ್ ತೂಕದ ಕೋಣವೊಂದು ಆಕಸ್ಮಿಕವಾಗಿ ಬಿದ್ದಿರುದನ್ನು ಗಮನಿಸಿದ ಅಲ್ಲಿನ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ
ಅಧಿಕಾರಿ ಹಾಗೂ ಸಿಬ್ಬಂದಿಯವರು ಘಟನಾ ಸ್ಥಳಕ್ಕೆ ತೆರಳಿ ಹಗ್ಗ ಹಾಗೂ ಹೋಸ್ ಗಳ ಸಹಾಯದಿಂದ ಕೋಣವನ್ನು ನೀರಿನಿಂದ ಮೇಲಕ್ಕೆತ್ತಿ ರಕ್ಷಿಸಿದರು.
ಕಾರ್ಯಾಚರಣೆಯಲ್ಲಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಎಸ್ ರಮೇಶ, ಮನೋಜ ಜಿ ಬಾಡಕರ, ಶಿವಪ್ರಸಾದ ನಾಯ್ಕ, ಕುಮಾರ ನಾಯ್ಕ, ಶಂಕರ ಲಮಾಣಿ, ಪುರುಷೊತ್ತಮ ನಾಯ್ಕ, ರಾಜೇಶ ನಾಯ್ಕ, ಅರುಣ ನಾಯ್ಕ ಪಾಲ್ಗೊಂಡಿದ್ದರು.