ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ತಾಯಿ ಪಾವೊಲಾ ಮೈನೋ ಅವರು ಕಳೆದ ಶನಿವಾರ ಇಟಲಿಯ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಸೋನಿಯಾ ಗಾಂಧಿ ಅವರ ತಾಯಿ ಪಾವೊಲಾ ಮೈನೋ ಅವರು ಆಗಸ್ಟ್ 27 ರಂದು ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ನಿನ್ನೆ ನಡೆದಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು ಕಳೆದ ವಾರ ಇಟಲಿಗೆ ತೆರಳಿದ್ದರು. ಸೋನಿಯಾ ಜೊತೆ ರಾಹುಲ್, ಪ್ರಿಯಾಂಕಾ ಗಾಂಧಿ ಸಹ ವಿದೇಶಕ್ಕೆ ತೆರಳಿದ್ದರು.
ಜೈರಾಮ್ ರಮೇಶ್ ಟ್ವೀಟ್ ಸಾರಾಂಶ ಹೀಗಿದೆ:
“ಶ್ರೀಮತಿ ಸೋನಿಯಾ ಗಾಂಧಿಯವರ ತಾಯಿ, ಶ್ರೀಮತಿ ಪಾವೊಲಾ ಮೈನೋ ಅವರು 27 ಆಗಸ್ಟ್ 2022 ರಂದು ಶನಿವಾರ ಇಟಲಿಯಲ್ಲಿ ತಮ್ಮ ಮನೆಯಲ್ಲಿ ನಿಧನರಾದರು. ಅಂತ್ಯಕ್ರಿಯೆ ನಿನ್ನೆ ನಡೆಯಿತು,” ಜೈರಾಮ್ ರಮೇಶ್, ಕಾಂಗ್ರೆಸ್, ಸಂವಹನಗಳ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಟ್ವೀಟ್ ಮಾಡಿದ್ದಾರೆ