ಕಾರವಾರ: ತಾಲೂಕಿನ ಅವರ್ಸಾ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕನ್ನಡದ ಕೋಟ್ಯಧಿಪತಿ ಗಣಪನನ್ನ ಪ್ರತಿಷ್ಠಾಪಿಸುವ ಮೂಲಕ ಗಮನ ಸೆಳೆದಿದೆ. ಒಂದು ಕಡೆ ಗಣೇಶನ ಹಬ್ಬ ಸಂಭ್ರಮ-ಸಡಗರದಿಂದ ನಡೆದರೆ ಮತ್ತೊಂದು ಕಡೆ ಅಗಲಿದ ಸ್ಯಾಂಡಲ್‌ವುಡ್ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಲು ಅವಕಾಶ ದೊರೆತಿದೆ.

ಇಲ್ಲಿ ಗಣಪ ಹಾಟ್ ಸೀಟಿನಲ್ಲಿ ಕುಳಿತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ಕನ್ನಡದ ಕೋಟ್ಯಾಧಿಪತಿ ಆಡಲು ಕುಳಿತಂತಿರುವುದೇ ವಿಶೇಷ. ಈ ಗಣಪನನ್ನ ನೋಡಲು ಜನ ಮುಗಿಬೀಳುತ್ತಿದ್ದಾರೆ. ಜಿಲ್ಲೆಯ ಜನತೆಯ ದೃಷ್ಟಿ ಸದ್ಯ ಇಲ್ಲಿಯ ಗಣೇಶೋತ್ಸವದ ಮೇಲೆ ನೆಟ್ಟಿದೆ.

RELATED ARTICLES  ಉಷಾ ಭಟ್ಟ ಅವರಿಗೆ ಡಾಕ್ಟರೇಟ್ ಪದವಿ

ಈ ಕನ್ನಡದ ಕೋಟ್ಯಧಿಪತಿ ಗಣಪ ಹಾಗೂ ಪುನೀತ್ ರಾಜಕುಮಾರ್ ಅವರ ಮೂರ್ತಿಯನ್ನು ತಯಾರು ಮಾಡಿರೋದು ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಕುಮ್ಮಣ್ಣ ಮೇತ್ರಿ ಮನೆತನದ ದಿನೇಶ ಮೇತ್ರಿ. ಈ ಮೇತ್ರಿ ಕುಟುಂಬ ಮೂರ್ತಿ ತಯಾರಿಕೆಯಲ್ಲಿ ಎತ್ತಿದ ಕೈ. ವರ್ಷವಿಡೀ ಈ ಕುಟುಂಬದಲ್ಲಿ ಮೂರ್ತಿಗಳ ನಿರ್ಮಾಣ ಕಾರ್ಯ ನಡೆಯುತ್ತಲೇ ಇರುತ್ತದೆ. ಇಂಥ ಕುಟುಂಬದ ದಿನೇಶ ಮೇತ್ರಿ, ಚಿತ್ರಕಲೆ, ರಂಗೋಲಿ, ಮೂರ್ತಿ ನಿರ್ಮಾಣದಂಥ ಕಲೆಗಳಿಂದ ಇಂದು ರಾಜ್ಯದಾದ್ಯಂತ ಪರಿಣಿತನಾಗಿ ಗುರುತಿಸಿಕೊಂಡಿದ್ದಾರೆ.

RELATED ARTICLES  ಸಾವಿನ ದವಡೆಯಲ್ಲಿದ್ದ ಆತ ತನ್ನ ಪ್ರೇಯಸಿಗೆ ಬರೆದ ಪತ್ರವನ್ನು ಓದಿದರೆ ತಪ್ಪದೇ ಕಣ್ಣೀರಿಡಬೇಕಾಗುತ್ತದೆ…!

ಇದೀಗ ಪುನೀತ್ ಹಾಗೂ ಗಣಪನನ್ನು ಕನ್ನಡದ ಕೋಟ್ಯಧಿಪತಿಯ ಸೆಟ್‌ನಲ್ಲಿ ಕೂತಂತೆ ತಯಾರು ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.