ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಕಾರು ಉರುಳಿ ಬಿದ್ದು ಐವರು ಸಾವನ್ನಪ್ಪಿರುವ ಘಟನೆ ಹಾಸನ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಕಾರು ಉರುಳಿ ಬಿದ್ದಿದ್ದು, ಕೆರೆಯಲ್ಲಿ ಶವ ತೇಲುತ್ತಿದ್ದುದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಮೃತ ದೇಹ ಹೊರ ತೆಗೆಯುವಾಗ ಉಳಿದ ನಾಲ್ಕು ಶವಗಳು ಕಾರಿನಲ್ಲೇ ಸಿಲುಕಿದ್ದನ್ನು ಗಮನಿಸಿದ ಪೊಲೀಸರು ಮೇಲಕ್ಕೆತ್ತಿದ್ದಾರೆ.

RELATED ARTICLES  ಮಾಲೂರು ಗೋಶಾಲೆಯಲ್ಲಿ "ಗೋವಿನೊಂದಿಗೆ ಸಂಕ್ರಾಂತಿ" ಹಬ್ಬ

ಮೃತರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ.ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆಯ ಅನಿಲ್(25), ಶಿವಮೊಗ್ಗದ ಮೂಲದ ಉಮೇಶ್ ಮತ್ತು ಅರ್ಜುನ್, ಎಂದು ತಿಳಿದು ಬಂದಿದೆ. ಇಬ್ಬರು ಮಹಿಳೆಯರ ಗುರುತು ಪತ್ತೆಯಾಗಬೇಕಿದೆ.

ಅನಿಲ್ ಪಾಕೆಟ್ ನಲ್ಲಿದ್ದ ಸಿನಿಮಾ ಟಿಕೆಟ್ ನಿಂದಾಗಿ, ಅವರು ಸಿನಿಮಾಗೆ ತೆರಳಿ ತಡರಾತ್ರಿ ಮನೆಗೆ ವಾಪಾಸಾಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಹಾಸನದಲ್ಲಿ ತುಂಬಾ ಕೆಲಸವಿದ್ದು ಮನೆಗೆ ಬರುವುದು ತಡವಾಗುತ್ತದೆ ಎಂದು ಅನಿಲ್ ತನ್ನ ತಾಯಿಗೆ ಕರೆ ಮಾಡಿ ತಿಳಿಸಿದ್ದಾಗಿ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

RELATED ARTICLES  'ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು' : ರಾಜೀನಾಮೆ ಅಂಗೀಕಾರ,ವಿಶ್ವಾಸ ಮತಯಾಚನೆಗೆ ಹಾಜರಾಗುವುದು ಕಡ್ಡಾಯವಲ್ಲ.