ಯಲ್ಲಾಪುರ: ಎಡಬಿಡದೆ ಸುರಿದ ಮಳೆ ಗಣೇಶನ ಹಬ್ಬದ ಸಂಭ್ರಮವನ್ನು ಹಾಳುಮಾಡುವ ಜೊತೆಗೆ ಅನೇಕ ತೊಂದರೆಗಳನ್ನೂ ತಂದೊಡ್ಡಿದೆ. ತಾಲೂಕಿನಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಸೂರಿಮನೆ ಸಂಪರ್ಕ ರಸ್ತೆ ಮತ್ತೆ ತುಡುಗುಣಿ ಹತ್ತಿರ ಕುಸಿತಕ್ಕೊಳಗಾಗಿದ್ದು, ಸೂರಿಮನೆ ಊರಿಗೆ ಸಂಪರ್ಕಕ್ಕೆ ಅಡ್ಡಿಯಾಗಿದೆ.

RELATED ARTICLES  ಅಂಕೋಲಾ ಸಿಪಿಐ , ಪಿ.ಎಸ್.ಐ ವರ್ಗಾವಣೆ

ಸುದ್ದಿ ತಿಳಿದ ತಕ್ಷಣ ಉಮ್ಮಚ್ಗಿ ಗ್ರಾ.ಪಂ.ಅಧ್ಯಕ್ಷೆ ರೂಪಾ ಪೂಜಾರಿ, ಜಡ್ಪಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ ಬಂಟ್, ಗ್ರಾ. ಪಂ. ಮಾಜಿ ಸದಸ್ಯ ರಾಮಚಂದ್ರ ಭಟ್ಟ ಸೂರಿಮನೆ, ಗ್ರಾ.ಪಂ.ಸದಸ್ಯರಾದ ಖೈತಾನ್ ಡಿಸೋಜ, ಅಶೋಕ ಪೂಜಾರಿ, ಕುಪ್ಪಯ್ಯ ಪೂಜಾರಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES  ಜನತಾ ಕಾಲೋನಿಯ‌‌ ನಿವಾಸಿ ನಾಪತ್ತೆ : ದೂರು ದಾಖಲು.

ಈ ಹಿಂದೆಯೇ ಕಳೆದ ಮಳೆಗಾಲದಲ್ಲಿ ಸೂರಿಮನೆ ರಸ್ತೆ ಕುಸಿತ ಉಂಟಾಗಿತ್ತು. ತಾತ್ಕಾಲಿಕವಾಗಿ ದುರಸ್ತಿ ಕೈಗೊಳ್ಳಲಾಗಿತ್ತು. ಅದಾದ ನಂತರ ಈ ಬಾರಿಯ ಬೇಸಿಗೆಯಲ್ಲೂ ಮಳೆಯ ಪರಿಣಾಮ ಮತ್ತೆ ಕುಸಿತ ಉಂಟಾಗಿತ್ತು. ಬುಧವಾರ ಸಂಜೆ ಮತ್ತೆ ಸೇತುವೆ ಕುಸಿದಿದೆ.