ಮುಂಡಗೋಡ : ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ಆರು ಜನ ಮುಸುಕುಧಾರಿ ಕಳ್ಳರ ತಂಡ‌ ಕಾವಲುಗಾರನನ್ನೂ ಕಟ್ಟಿಹಾಕಿ ಮಳಗಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ದರೋಡೆ ಮಾಡಿರುವ ಘಟನೆ ನಡೆದಿದೆ. ದುಷ್ಕರ್ಮಿಗಳು ಬಾಗಿಲು ಮುರಿದು ಹಣ ಹಾಗೂ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಕಾವಲುಗಾರ ಮಾದೇವಪ್ಪ ತಳವಾರ ಎಂಬವರನ್ನು ಹೊಡೆದು ಕಟ್ಟಿ ಹಾಕಿ, ಮಳಗಿ ಪಂಚಾಯತ್ ವ್ಯಾಪ್ತಿಯ ರೈತರು ವ್ಯವಹಾರ ನಡೆಸುವ ಸಹಕಾರಿ ಸಂಘದಲ್ಲಿ ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ಆರು ಜನ ಮುಸುಕುಧಾರಿ ಕಳ್ಳರ ತಂಡ‌ ಕಳ್ಳತನ ಮಾಡಿದ್ದಾರೆ.

RELATED ARTICLES  ಓದು ಮನಸ್ಥಿತಿಯನ್ನು ವಿಸ್ತ್ರತಗೊಳಿಸುತ್ತದೆ -ಉಲ್ಲಾಸ ಹುದ್ದಾರ

ಕಳ್ಳತನದ ಸುದ್ದಿ ತಿಳಿದು ಬಂಗಾರ ಅಡವಿಟ್ಟ ಜನರು ಸೊಸೈಟಿಯತ್ತ ಧಾವಿಸುತ್ತಿದ್ದಾರೆ. ಸ್ಥಳಕ್ಕೆ ಮುಂಡಗೋಡ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರವಾರದಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಘಟನಾ ಸ್ಥಳಕ್ಕೆ ಆಗಮಿಸಿದೆ.

ಸೊಸೈಟಿಯ ಹಿಂಬದಿಯಿಂದ ಒಳ ನುಗ್ಗಿದ್ದ ಕಳ್ಳರು ಗ್ಯಾಸ್ ಕಟ್ಟರ್ ನಿಂದ ಕಬ್ಬಿಣದ ಬಾಗಿಲು ಕಟ್‌ ಮಾಡಿ ಸೊಸೈಟಿ ಒಳ ಹೊಕ್ಕಿದ್ದಾರೆ. ನಂತರ ಕಬ್ಬಿಣದ ಕಪಾಟುಗಳನ್ನು ಕಟ್ ಮಾಡಿ ಬಂಗಾರ ಹಾಗೂ ಹಣವನ್ನು ಕದ್ದು, ನಸುಕಿನ ಜಾವ 4 ಗಂಟೆ ಅಂದಾಜಿಗೆ ಸೊಸೈಟಿಯಿಂದ ಹೋಗಿದ್ದಾರೆಂದು ಕಾವಲುಗಾರ ಮಾಹಿತಿ ನೀಡಿದ್ದಾನೆ.

RELATED ARTICLES  ತೋಟಕ್ಕೆ ಹಾಕಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಭಟ್ಕಳದಲ್ಲಿ ಮಗು ಸಾವು.

ಈ ಹಿಂದೆಯೂ ಸೊಸೈಟಿ ಕಳ್ಳತನಕ್ಕೆ ದುಷ್ಕರ್ಮಿಗಳು ವಿಫಲ ಯತ್ನ ನಡೆಸಿದ್ದರು. ರೈತರು ಹಾಗೂ ಸಾರ್ವಜನಿಕರು ಈ ಸೊಸೈಟಿಯಲ್ಲಿ ಭಾರೀ ಪ್ರಮಾಣದ ಆಭರಣಗಳನ್ನು ಅಡವಿಟ್ಟಿದ್ದರು ಎನ್ನಲಾಗಿದೆ.