ಕುಮಟಾ : ತಾಲೂಕಿನ ಪ್ರಸಿದ್ಧ ನ್ಯಾಯವಾದಿಗಳು ಹಾಗೂ ಹವ್ಯಕ ವಿದ್ಯಾ ವರ್ಧಕ ಸಂಘ ಕುಮಟಾ ಇದರ ಅಧ್ಯಕ್ಷರು, ಶ್ರೀ ಉಪ್ಪಿನ ಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಆಗಿದ್ದ ಶ್ರೀ ಶಂಕರಮೂರ್ತಿ ಶಾಸ್ತ್ರಿ ಕೊನೆಯುಸಿರೆಳೆದಿದ್ದಾರೆ.

RELATED ARTICLES  ಐತಿಹಾಸಿಕ ಕ್ಷಣದ ಸವಿ ನೆನಪಿನೊಂದಿಗೆ ಕದಂಬೋತ್ಸವಕ್ಕೆ ಅದ್ದೂರಿ ಚಾಲನೆ.

ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಕಳೆದ ಅನೇಕ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಲೂಕಿನ ಪ್ರಸಿದ್ಧ ವಕೀಲರಲ್ಲಿ ಒಬ್ಬರಾಗಿದ್ದ ಇವರು ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು. ಇದೀಗ ಅವರು ತಮ್ಮ ಕುಟುಂಬ ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ.

RELATED ARTICLES  ವಿ.ಆರ ಏಲ್.ಬಸ್ಸ್ ಹಾಗೂ ಪ್ರಯಾಣಿಕರ ಟೆಂಪೊ ನಡುವೆ ಅಪಘಾತ.

ಅವರ ಆತ್ಮಕ್ಕೆ ಸದ್ಗತಿಯನ್ನು ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ಉಪ್ಪಿನ ಗಣಪತಿ ಹಾಗೂ ಪರಿಹಾರ ದೇವರು ನೀಡಲೆಂದು ಅವರ ಹಿತೈಷಿಗಳು ಸ್ನೇಹಿತರು ಹಾಗೂ ಬಂಧುಗಳು ಪ್ರಾರ್ಥಿಸಿದ್ದಾರೆ.