ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಕರ್ನಾಟಕ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಟಿಇಟಿ ಪರೀಕ್ಷೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಟಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕ, ಪರೀಕ್ಷಾ ದಿನಾಂಕ ಮತ್ತು ಇನ್ನಿತರ ಮಾಹಿತಿಯನ್ನು ನೀಡಿದೆ.

ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮಾಹಿತಿ ನೀಡಿದ್ದು, 2022ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ( KAR-TET 2022)ಕ್ಕೆ ಇಲಾಖೆಯ ವೆಬ್ ಸೈಟ್ www.schooleducation.kar.nic.in ಜಾಲತಾಣದಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಅರ್ಹ ಅಭ್ಯರ್ಥಿಗಳು ಟಿಇಟಿ-2022ರ ಪರೀಕ್ಷೆಗೆ ಆನ್‌ಲೈನ್‌ ಮೂಲಕ ಅರ್ಜಿಯನ್ನು ದಿನಾಂಕ 01-09-2022ರಿಂದ 30-09-2022ರವರೆಗೆ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕ, ವಯೋಮಿತಿ ಸೇರಿದಂತೆ ವಿವಿಧ ಮಾಹಿತಿಗಳಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಸೂಚಿಸಿದೆ.

RELATED ARTICLES  ಮತ್ತೆ ಮಳೆಯ ಅಲರ್ಟ್..!

ಅಭ್ಯರ್ಥಿಗಳಿಗೆ ಸೂಚನೆಗಳು

ಕರ್ನಾಟಕ – ಶಿಕ್ಷಕರ ಅರ್ಹತಾ ಪರೀಕ್ಷೆ-2022ಕ್ಕೆ, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ದಿನಾಂಕ 01/09/2022 ರಿಂದ 30/09/2022ರ ಒಳಗಾಗಿ ಇಲಾಖಾ ವೆಬ್‌ಸೈಟ್ www.schooleducation.kar.nic.in ಮೂಲಕ ಸಲ್ಲಿಸುವುದು.
ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯನ್ನು ಪೂರ್ಣ ವಿವರಗಳೊಂದಿಗೆ ಭರ್ತಿ ಮಾಡಿ, ಸ್ಕ್ಯಾನ್‌ ಮಾಡಲಾದ ತಮ್ಮ ಭಾವಚಿತ್ರ ಹಾಗೂ ಸಹಿಯನ್ನು ಜೆ.ಪಿ.ಇ.ಜಿ. (ಜೆಪಿಜಿ ಫಾರ್ಮೆಟ್)ನಮೂನೆಯಲ್ಲಿ ಅಪ್‌ಲೋಡ್ ಮಾಡುವುದು.

ಆನ್‌ಲೈನ್ ಅರ್ಜಿಯಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಪೂರ್ಣವಾಗಿ ಭರ್ತಿ ಮಾಡಿದ ನಂತರ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಹಾಗೂ ಪೂರ್ಣವಿವರಗಳನ್ನೊಳಗೊಂಡ ಅರ್ಜಿಯ ಕಂಪ್ಯೂಟರ್ ಜನರೇಟೆಡ್ ಪ್ರತಿಯ ಪ್ರಿಂಟ್ ಔಟ್ ನ್ನು ಪಡೆದುಕೊಳ್ಳುವುದು.

RELATED ARTICLES  ಇಸ್ರೊದಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ಟಿಇಟಿ-2022 ಪರೀಕ್ಷಾ ಶುಲ್ಕ ವಿವರ

ಸಾಮಾನ್ಯವರ್ಗ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ- ಪತ್ರಿಕೆ-1 ಅಥವಾ ಪತ್ರಿಕೆ-2 ಮಾತ್ರ- ರೂ. 700. ಪತ್ರಿಕೆ-1 ಹಾಗೂ ಪತ್ರಿಕೆ-2 ರೂ. 1000.
ಪ.ಜಾ/ಪ.ಪಂ/ ಪ್ರವರ್ಗ-1 ಅಭ್ಯರ್ಥಿಗಳಿಗೆ – ಪತ್ರಿಕೆ-1 ಅಥವಾ ಪತ್ರಿಕೆ-2 ಮಾತ್ರ- ರೂ. 350. ಪತ್ರಿಕೆ-1 ಹಾಗೂ ಪತ್ರಿಕೆ-2 ರೂ. 500.
ವಿಶೇಷ ಅಗತ್ಯಯುಳ್ಳ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ದಿಂದ ವಿನಾಯಿತಿ ಇರುತ್ತದೆ.

ಟಿಇಟಿ-2022 ಪರೀಕ್ಷಾ ದಿನಾಂಕ-06-11-2022

ಪತ್ರಿಕೆ-1 – ಬೆಳಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆವರೆಗೆ.
ಪತ್ರಿಕೆ-2 – ಮಧ್ಯಾಹ್ನ 2 ರಿಂದ 4.30ರ ವರೆಗೆ.