ಭಟ್ಕಳ: ತಾಲೂಕಿನ ಜಾಲಿಯ ಮೀನುಗಾರ ಯುವಕ ನಾಗರಾಜ ಮೊಗೇರ ಕಳೆದ 3 ದಿನಗಳ ಹಿಂದೆ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿ ಅಲೆಗಳ ಹೊಡೆತಕ್ಕೆ ಸಿಲುಕಿ ಕಾಣೆಯಾಗಿದ್ದ, ಆತನಿಗಾಗಿ ಕಳೆದ 3 ದಿನಗಳಿಂದ ಮೀನಗಾರರು ಮುಳುಗು ತಜ್ಞರು ಹುಡುಕಾಟ ನಡೆಸಿದ್ದರೂ ಶವ ದೊರಕಿರಲಿಲ್ಲ ಇಂದು ಕರಾವಳಿ ಕಾವಲು ಪಡೆ ಕಾರ್ಯಚರಣೆ ನಡೆಸಿ ಶವ ಹುಡುಕಲು ಯಶಸ್ವಿಯಾಗಿದ್ದಾರೆ.

RELATED ARTICLES  ಕುಮಟಾದಲ್ಲಿ ಕಾಣಿಸಿಕೊಂಡ ಅಪರೂಪದ ಹೆಬ್ಬಾವು

ಉಡುಪಿ ಕರಾವಳಿ ಪೊಲೀಸ್ ಪಡೆಯ ಎಸ್ ಪಿ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಪಿ ಎಸ್ ಐ ಅಣ್ಣಪ್ಪ ಮೊಗೇರ್, ಹವಾಲ್ದಾರ ಕೃಷ್ಣ ನಾಯ್ಕ, ಕ್ಯಾಪ್ಟನ್ ಮಲ್ಲಪ್ಪ ಗೌಡರ ಹಾಗೂ ಸಂಜೀವ ನಾಯ್ಕ ನೇತೃತ್ವದ ತಂಡ ಶವ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಇಂದು ಯುವಕನ ಶವ ಪತ್ತೆಯಾಗಿದ್ದು, ಅಧಿಕಾರಿಗಳು ಮುಂದಿನ ಪ್ರಕ್ರಿಯೆ ಕೈಗೊಂಡಿದ್ದಾರೆ.

RELATED ARTICLES  ರೈಲ್ವೆಯಿಂದ ಆಯತಪ್ಪಿ ಬಿದ್ದು ಯುವಕ ಸಾವು