ಕುಮಟಾ : ಜಿಲ್ಲೆ ಕಂಡ ಖ್ಯಾತ ಹಾಗೂ ಉತ್ಸಾಹಿ ವಕೀಲ ಶಂಕರ ಶಾಸ್ತ್ರೀ ಅವರ ಅಕಾಲಿಕ ನಿಧನಕ್ಕೆ ಲೋಕಶಕ್ತಿ ಪಕ್ಷದ ಕುಮಟಾ -ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ದಿನೇಶ ಚಂದ್ರ ಎನ್ ಅಂಗಡಿಕೇರಿ ಸಂತಾಪ ವ್ಯಕ್ತ ಪಡಿಸಿದ್ದಾರೆ.

ವಕೀಲ ಶಾಸ್ತ್ರೀ ಯವರ ನಿಧನ ಕುಮಟಾ ಜನರಿಗೆ ಬರ ಸಿಡಿಲಿನಂತೆ ಬಡಿದಿದೆ. ಇವರೊಬ್ಬ ಕೇವಲ ವ್ಯಕ್ತಿ ಅಲ್ಲ ಶಕ್ತಿ ಆಗಿದ್ದರು. ಇವರ ಸಾವು ಕುಮಟಾ ಜನತೆಗೆ ತುಂಬಲಾರದ ನಷ್ಟ ಆಗಿದೆ. ತಮ್ಮ ಸುಧೀರ್ಘ ವೃತ್ತಿ ಜೀವನ ದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ನಿಷ್ಠೆ ಯಿಂದ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು. ನೊಂದ ಪ್ರತಿ ಯೊಬ್ಬ ವ್ಯಕ್ತಿಗೂ ಉಚಿತವಾಗಿ ಸಲಹೆ ಸೂಚನೆ ಗಳನ್ನು ಕೊಡುತ್ತಿದ್ದರು. ವಕೀಲ ವೃತ್ತಿ ಯನ್ನೂ ಹೊರತುಪಡಿಸಿ ಅವರು ಸದಾಕಾಲ ಸಮಾಜದ ಏಳಿಗೆಗಾಗಿ ದುಡಿಯುತ್ತಿದ್ದರು.

RELATED ARTICLES  ಕುಮಟಾ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಹೊನ್ನಪ್ಪ ನಾಯಕ.

ಅದಕ್ಕೆ ಸಾಕ್ಷಿ ಎಂಬಂತೆ, ಡಾ. ಟಿ. ಟಿ ಹೆಗಡೆ ಯವರ ನಿಧನ ನಂತರ ಹವ್ಯಕ ವಿದ್ಯಾವರ್ಧಕ ಸಂಘ ದ ಅಧ್ಯಕ್ಷರಾಗಿ ಪ್ರಾಮಾಣಿಕ ವಾಗಿ ದುಡಿಯುತ್ತಿದ್ದರು. ಸದಾ ಸಮಾಜದ ಒಳಿತಿಗಾಗಿ ದುಡಿಯುತ್ತಿದ್ದ ಇವರ ಸಾವು ವಿಧಿಯ ಅಟ್ಟಹಾಸಕ್ಕೆ ಒಂದು ಉದಾಹರಣೆಯಾಗಿದೆ. ಇವರ ಆತ್ಮಕೆ ದೇವರು ಚಿರಶಾಂತಿ ಹಾಗೂ ಇವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ದಿನೇಶ ಚಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಸಂಪನ್ನಗೊಂಡ ಹೆಗಡೆ ವಲಯ ಸಭೆ.