ಕುಮಟಾ : ತಾಲೂಕಿನ ಪ್ರಸಿದ್ಧ ನ್ಯಾಯವಾದಿಗಳು ಹಾಗೂ ಹವ್ಯಕ ವಿದ್ಯಾ ವರ್ಧಕ ಸಂಘ ಕುಮಟಾ ಇದರ ಅಧ್ಯಕ್ಷರು, ಶ್ರೀ ಉಪ್ಪಿನ ಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಆಗಿದ್ದ ಶ್ರೀ ಶಂಕರಮೂರ್ತಿ ಶಾಸ್ತ್ರಿ ಕೊನೆಯುಸಿರೆಳೆದಿದ್ದು ಅವರ ಪಾರ್ಥಿವ ಶರೀರವನ್ನು ಕುಮಟಾದ ಹವ್ಯಕ ಸಭಾ ಭವನದಲ್ಲಿ ಇಟ್ಟು ಗೌರವ ಒಂದನೆ ಸಲ್ಲಿಸಲಾಯಿತು.

ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಕಳೆದ ಅನೇಕ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಲೂಕಿನ ಪ್ರಸಿದ್ಧ ವಕೀಲರಲ್ಲಿ ಒಬ್ಬರಾಗಿದ್ದ ಇವರು ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು. ಇದೀಗ ಅವರು ತಮ್ಮ ಕುಟುಂಬ ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ.

RELATED ARTICLES  ಸರಳತೆ ಮೆರೆದು ಅಚ್ಚರಿ ಮೂಡಿಸಿದ ಡಿ.ಸಿ

ಕುಮುಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ, ವೈದ್ಯರಾದ ಡಾ. ಜಿ.ಜಿ ಹೆಗಡೆ ಹಾಗೂ ಬಿಜೆಪಿ ಹಾಗೂ ಇತರ ಪಕ್ಷಗಳ ಪ್ರಮುಖರು ಮತ್ತು ವಿದ್ಯಾವರ್ಧಕ ಸಂಘದ ಸದಸ್ಯರು ಅವರ ಅಂತಿಮ ದರ್ಶನ ಪಡೆದರು.

RELATED ARTICLES  ಶಿರಸಿಯಲ್ಲಿ ಬೆಂಕಿಗೆ ಬಲಿಯಾದ ಶಿಕ್ಷಕ: ನಡೆಯಿತು ಹೃದಯ ವಿದ್ರಾವಕ ಘಟನೆ.

ಅವರ ಆತ್ಮಕ್ಕೆ ಸದ್ಗತಿಯನ್ನು ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ಉಪ್ಪಿನ ಗಣಪತಿ ಹಾಗೂ ಪರಿಹಾರ ದೇವರು ನೀಡಲೆಂದು ಅವರ ಹಿತೈಷಿಗಳು ಸ್ನೇಹಿತರು ಹಾಗೂ ಬಂಧುಗಳು ಪ್ರಾರ್ಥಿಸಿದ್ದಾರೆ.