ಭಟ್ಕಳ: ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಅನೇಕ ಜನರು ನಮ್ಮ ನಡುವೆ ಕಾಣಸಿಗುತ್ತಾರೆ. ಅಂತವರ ಸಾಲಿನಲ್ಲಿ ತಾಲೂಕಿನ ಶಿರಾಲಿಯ ಮತ್ತಿಗುಂಡಿ ನಿವಾಸಿ ಮಾಸ್ತಮ್ಮ ವೆಂಕಟಪ್ಪ ನಾಯ್ಕ ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಆ.21 ರಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಮಗ ದಾಖಲಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾಸ್ತಮ್ಮ ಸೆ.1 ರಂದು ಸಾವನ್ನಪ್ಪಿದ್ದಾರೆ.

RELATED ARTICLES  ಪುನೀತನ ಜೊತೆ ಕುಳಿತ ಗಣಪ : ವಿಭಿನ್ನ ಕಲ್ಪನೆಗೆ ಜನ ಮೆಚ್ಚುಗೆ

ಮಗ ಮಂಜುನಾಥ ನಾಯ್ಕ, ತಾಯಿಯ ಸಾವಿನ ಬಳಿಕ ಮತ್ತೊಬ್ಬರಿಗೆ ತನ್ನ ತಾಯಿಯ ಕಣ್ಣು ಬೆಳಕಾಗಲಿ ಎಂಬ ಉದ್ದೇಶದಿಂದ ಕುಟುಂಬದವರ ಒಪ್ಪಿಗೆ ಪಡೆದು ಭಟ್ಕಳ ಸರ್ಕಾರಿ ಆಸ್ಪತ್ರೆಯ ಮೂಲಕ ಉಡುಪಿಯ ಪ್ರಸಾದ ನೇತ್ರಾಲಯಕ್ಕೆ ನೇತ್ರದಾನ ಮಾಡಿದ್ದಾನೆ.

ಆಸ್ಪತ್ರೆಗೆ ಬಂದ ಉಡುಪಿಯ ಪ್ರಸಾದ ನೇತ್ರಾಲಯ ತಂಡ ನಿಯಮದ ಪ್ರಕಾರ ಕಣ್ಣನ್ನು ತೆಗದುಕೊಂಡು ತೆರಳಿದ್ದಾರೆ. ಈ ನೇತ್ರದಾನ ಪ್ರಕ್ರಿಯೆಯಲ್ಲಿ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಸಹಕರಿಸಿದರು.

RELATED ARTICLES  ಕದಂಬ ನೌಕಾನೆಲೆಯ ಬೋಟ್ ಇಂಜಿನ್ ನಲ್ಲಿ ಬೆಂಕಿ ಅವಘಡ.

ಪುನೀತ್ ಪ್ರೇರಣೆ

ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ ಸಾವಿನ ಬಳಿಕ ಅವರ ನೇತ್ರದಾನದಿಂದ ಪ್ರೇರಿತರಾದ ಮಂಜುನಾಥ, ಅನಾರೋಗ್ಯದಿಂದ ಮೃತಪಟ್ಟ ತನ್ನ ತಾಯಿಯ ನೇತ್ರವನ್ನು ಕುಟುಂಬದವರ ಒಪ್ಪಿಗೆ ಪಡೆದು ದಾನ ಮಾಡಿದ ಮೊದಲ ಘಟನೆಗೆ ಭಟ್ಕಳ ಸರ್ಕಾರಿ ಆಸ್ಪತ್ರೆ ಸಾಕ್ಷಿಯಾಗಿದೆ.