ಹೊನ್ನಾವರ: ಪ್ರಮಾಣಿಕತೆಯ ಮೂಲಕ ಅನೇಕರು ನಮಗೆ ಮಾರ್ಗದರ್ಶಕರಾಗಿ ನಿಲ್ಲುತ್ತಾರೆ. ಅಂತಹುದೇ ಒಂದು ಘಟನೆ ನಡೆದಿದೆ. ಹಣ, ಮೊಬೈಲ್, ಎಟಿಎಮ್ ಇದ್ದ ಬ್ಯಾಗ್ ಅನ್ನು ಸಿಕ್ಕಿದ್ದು, ಸಿಕ್ಕಂತೆ ತಂದೊಪ್ಪಿಸಿದ ಘಟನೆ ನಡೆದಿದೆ.

ಯುವಕನೊಬ್ಬನಿಗೆ ರಸ್ತೆ ಮಧ್ಯೆ ಮಹಿಳೆಯೊಬ್ಬಳ ಬ್ಯಾಗ್ ದೊರೆತಿದ್ದು, ಇದದಲ್ಲಿ ಇದ್ದ ಬೆಲೆಬಾಳುವ ವಸ್ತುಗಳನ್ನೂ ಯಥಾಸ್ಥಿತಿಯಲ್ಲಿ, ಬ್ಯಾಗ್ ಅನ್ನು ನೇರವಾಗಿ ಹೊನ್ನಾವರ ಪೊಲೀಸ್ ಠಾಣಿಗೆ ಆಗಮಿಸಿ ಯುವಕ ನೀಡಿ ಪ್ರಾಮಾಣಿಕತೆ ಮರೆದಿದ್ದಾನೆ.

RELATED ARTICLES  ಅಕ್ಟೋಬರ್ 20 ರಿಂದ ನವೆಂಬರ್ 03 ರ ವರೆಗೆ ಕುಮಟಾದ ಉದಯ ಬಜಾರದಲ್ಲಿ “DEEPAVALI DELIGHTS SALE” :ಗ್ರಾಹಕರಿಗಾಗಿ ಕೊಡುಗೆಗಳ ಮಹಾಪೂರ.

ಕೊನೆಗೆ ಈ ಬ್ಯಾಗ್ ಅನ್ನು ಸಂಬoಧಿಸಿದವರಿಗೆ ನೀಡಲಾಗಿದೆ. ಶಿರಸಿಯ ವತ್ಸಲ ಸುಬ್ಬಯ್ಯ ನಾಯ್ಕ ಎನ್ನುವವರು ಮಗನ ಕಾರಿನಲ್ಲಿ ಆಗಮಿಸುತ್ತಿದ್ದಾಗ ಬ್ಯಾಗ್ ಕಳೆದುಕೊಂಡಿದ್ದರು. ಆದರೆ, ಬ್ಯಾಗ್ ಕಳೆದುಕೊಂಡ ವಿಷಯ ಇವರ ಗಮನಕ್ಕೆ ಬಂದಿರಲಿಲ್ಲ. ಆದರೆ, ಮಾರ್ಗದಲ್ಲಿ ತೆರಳುತ್ತಿದ್ದ ಮೂಲತಃ ತಾಲೂಕಿನ ಚಿಕ್ಕನಕೋಡ ಗ್ರಾಮದ ಹಿರೆಬೈಲ್ ನಿವಾಸಿ ಪ್ರಮೋದ ಜಯಂತ ನಾಯ್ಕ ಇವರು ರಸ್ತೆಯಲ್ಲಿ ಬಿದ್ದ ಬ್ಯಾಗ್ ಗಮನಿಸಿದ್ದು, ಕೂಡಲೇ ಪೊಲೀಸ್ ಠಾಣೆಗೆ ನೀಡಿದ್ದಾರೆ.

RELATED ARTICLES  ಹೆಂಡತಿಯ ಅಂತ್ಯಕ್ರಿಯೆ ನಡೆಸಿ ಬರುವ ಒಳಗಾಗಿ ಮನೆ ಕಳ್ಳತನ.

ಪಿಎಸೈ ಸಾವಿತ್ರಿ ನಾಯಕ ಸಂಬoಧಿಸಿದ ಮಹಿಳೆಯನ್ನು ಠಾಣಿಗೆ ಕರೆಯಿಸಿ ಬ್ಯಾಗನ್ನು ಹಸ್ತಾಂತರಿಸಿದರು. ಪ್ರಮೋದ ನಾಯ್ಕ ಇವರ ಪ್ರಾಮಾಣಿಕತೆಗೆ ಸಾರ್ವಜನಿಕರು ಹಾಗೂ ಇಲಾಖೆಯ ಸಿಬ್ಬಂದಿಗಳು ಮೆಚ್ಚುಗೆ ಸೂಚಿಸಿದ್ದಾರೆ.