ಕಾರವಾರ: ದಾಂಡೇಲಿ, ಹಳಿಯಾಳ ಗಾಂವಠಾಕಾದ ಅಂದಾಜು 46 ವಯಸ್ಸಿನ ಲಾರಿ ಚಾಲಕನಾದ ಅಬ್ದುಲ್ ಗಣಿ ಮಹಮ್ಮದ್ ಮಕಾಂದಾರನ 7 ಮಗಳಾದ ಬಾಲಕಿ ಬಿಬಿಫಾತಿಮಾ ಅಬ್ದುಲ್ ಗಣಿ ಮಕಾಂದಾರ ಈಕೆಯು ಉತ್ತರ ಕನ್ನಡದ ಮಕ್ಕಳ ಕಲ್ಯಾಣ ಸಮಿತಿಯವರ ಆದೇಶದ ಮೇರೆಗೆ ಸರಕಾರಿ ಬಾಲಕಿಯರ ಬಾಲಮಂದಿರ ಕಾರವಾರದಲ್ಲಿದ್ದು, ಈಕೆಯ ತಾಯಿ ಮದಿನಾ ಅಬ್ದುಲ್ ಗಣಿ ಮಕಾಂದಾರ ಮೃತಪಟ್ಟಿರುತ್ತಾಳೆ.

RELATED ARTICLES  ಸಮಾಜದಲ್ಲಿ ಇಂತಹ ಮಾದರೀ ವ್ಯಕ್ತಿಗಳೂ ಇರ್ತಾರೆ...!

ಈವರೆಗೂ ಮಕ್ಕಳ ಪಾಲಕರಾಗಲಿ, ಸಂಬಂಧಿಕರಾಗಲಿ ಮಗುವನ್ನು ನೋಡಲು ಬಂದಿರುವುದಿಲ್ಲ. ಇತ್ತೀಚೆಗೆ ಬಾಲಕಿಯ ತಂದೆಯದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಾಲೆಗಳ್ಳಿ ಖಾಯಂ ವಿಳಾಸವಾಗಿದೆ ಎಂದು ತಿಳಿದು ಬಂದಿದ್ದು, ಆದರೆ ಸದ್ಯದ ಮಟ್ಟಿಗೆ ಆ ವಿಳಾಸದಲ್ಲಿಯೂ ವ್ಯಕ್ತಿ ಕಂಡುಬಂದಿರುವುದಿಲ್ಲ.

RELATED ARTICLES  ತೆನಾಲಿ ಮಹಾಪರೀಕ್ಷೆಯನ್ನು ಪೂರೈಸಿದ ಮಹೇಶ ಭಟ್ಟ

ಹಾಗಾಗಿ ಈ ವ್ಯಕ್ತಿ ಕಂಡುಬಂದಲ್ಲಿ 08382-226501 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಹಾಗೂ ಆ ವ್ಯಕ್ತಿಯು ಮಕ್ಕಳ ಕಲ್ಯಾಣ ಸಮಿತಿ ಕಾರವಾರರವರಲ್ಲಿ ಹಾಜರಾಗಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.