ಕಾರವಾರ: ಪ್ರಸಕ್ತ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಗೊಂಡಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಓರ್ವ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಹಿರಿಯ ಪ್ರಾಥಮಿಕ ವಿಭಾಗ:
ವಿನುತಕುಮಾರಿ ಗೋವಿಂದರಾಯ ನಾಯಕ (ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಗಡಿ, ಕಾರವಾರ), ಲಕ್ಷ್ಮೀ ಎನ್. ನಾಯಕ( ಸಹ ಶಿಕ್ಷಕಿ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಅಂಕೋಲಾ), ಮಂಜುನಾಥ ಎಮ್. ನಾಯ್ಕ (ಸಹ ಶಿಕ್ಷಕ (ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ ಗುಡಿಗಾರ ಗಲ್ಲಿ ಕುಮಟಾ), ಗಣಪತಿ ಅಮಕೂಸ ಗೌಡ (ಸಹ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಗರೆ ನಂ-1 ಹೊನ್ನಾವರ), ಈಶ್ವರ ವೆಂಕಟರಮಣ ಹೆಗಡೆ (ಸಹ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಡಿಮುಂಡಕಿ ಭಟ್ಕಳ)

RELATED ARTICLES  ಮಾರಿಕಾಂಬಾ ದೇವಾಲಯದ ಪ್ರಸಾದಕ್ಕೆ ಬಿಎಚ್‌ಒಜಿ ಪ್ರಮಾಣ ಪತ್ರ

ಪ್ರೌಢಶಾಲಾ ವಿಭಾಗ:
ತಿಪ್ಪೇಸ್ವಾಮಿ ಜೆ.ಬಿ. (ಇಂಗ್ಲಿಷ್ ಶಿಕ್ಷಕ, ಶಿವಾಜಿ ವಿದ್ಯಾ ಮಂದಿರ ಅಸ್ಫೋಟಿ ಕಾರವಾರ), ವಿಜಯಾ ಎಚ್.ಗಾಂವಕರ್ (ಹಿಂದಿ ಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ ಕೇಣಿ, ಅಂಕೋಲಾ), ಮಾದೇವ ಬೊಮ್ಮ ಗೌಡ (ವಿಜ್ಞಾನ ಶಿಕ್ಷಕ,ಸೆಕೆಂಡರಿ ಸ್ಕೂಲ್ ಹಿರೇಗುತ್ತಿ ಕುಮಟಾ). ಎಸ್.ವೈ. ಬೈಲೂರು (ಮುಖ್ಯಾಧ್ಯಾಪಕ, ಸೇಂಟ್ ಥಾಮಸ್ ಪ್ರೌಢಶಾಲೆ ಹೊನ್ನಾವರ), ರಾಜೆಸಾಬ್ ನಿಪ್ಪಾಣಿ (ದೈಹಿಕ ಶಿಕ್ಷಕ, ಐಎಯುಎಚ್‌ಎಸ್ ಭಟ್ಕಳ).

ಕಿರಿಯ ಪ್ರಾಥಮಿಕ ಶಾಲೆ:
ಗೀತಾ ಎನ್ ರಾಣೆ (ಸಹ ಶಿಕ್ಷಕಿ, ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ, ಶೇಜ್‌ಬಾಗ್, ಕಾರವಾರ), ವಿನಾಯಕ ಪಿ.ನಾಯ್ಕ (ಸಹಶಿಕ್ಷಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಜ್ರಳ್ಳಿ, ಅಂಕೋಲಾ), ಶ್ರೀಕಾಂತ ಸುಬ್ರಾಯ ಹೆಗಡೆ (ಸಹ ಶಿಕ್ಷಕ,ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಡ್ಲೆ ಅಂತ್ರವಳ್ಳಿ ಕುಮಟಾ), ಶೋಭಾ ಶೇಟ್ (ಸಹ ಶಿಕ್ಷಕಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊನ್ನಾವರ), ಮಹೇಶ್ ಸಿ. ತೆರಮಕ್ಕಿ, (ಸಹ ಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತೂದಳ್ಳಿ ಭಟ್ಕಳ) ಇವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

RELATED ARTICLES  ಏಕಾಏಕಿ ಮನೆಗೆ ಬೆಂಕಿ : ಸುಟ್ಟು ಕರಕಲಾದ ವಸ್ತುಗಳು.

ಕುಮಟಾದ ಮೂವರಿಗೆ ಪ್ರಶಸ್ತಿ.

ಕುಮಟಾ ತಾಲ್ಲೂಕಿನ ಸ.ಮಾ.ಹಿ.ಪ್ರಾ.ಶಾಲೆ ಗುಡಿಗಾರಗಲ್ಲಿಯ ಶಿಕ್ಷಕರಾದ ಶ್ರೀ ಮಂಜುನಾಥ ಎಂ. ನಾಯ್ಕ ಹಾಗೂ ಸ.ಕಿ.ಪ್ರಾ.ಶಾಲೆ ಕುಡ್ಲೆಯ ಶಿಕ್ಷಕರಾದ ಶ್ರೀ ಶ್ರೀಕಾಂತ ಹೆಗಡೆಯವರಿಗೆ ಹಾಗೂ ಮಾದೇವ ಬೊಮ್ಮ ಗೌಡ ವಿಜ್ಞಾನ ಶಿಕ್ಷಕ,ಸೆಕೆಂಡರಿ ಸ್ಕೂಲ್ ಹಿರೇಗುತ್ತಿ ಕುಮಟಾ ಇವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರಕಿದೆ. ಅವರಿಗೆ ಅವರ ಹಿತೈಶಿಗಳು ಸ್ನೇಹಿತರು ಅಭಿನಂದನೆಗಳನ್ನು ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೀರ್ತಿ, ಪ್ರಶಸ್ತಿ, ಯಶಸ್ಸುಗಳು ಸಿಗಲಿ ಎಂದು ಹಾರೈಸಿದ್ದಾರೆ.