ಶಿರಸಿ: ಶಿಕ್ಷಣದ ಜೊತೆಗೆ ರಂಗಭೂಮಿ, ಸಾಹಿತ್ಯ
ಚಟುವಟಿಕೆಗಳಲ್ಲೂ ಸಕ್ರೀಯವಾಗಿ‌‌ ತೊಡಗಿಕೊಂಡಿರುವ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಕನ್ನಡ ಶಿಕ್ಷಕರಾದ ನಾರಾಯಣ ಭಾಗ್ವತ್ ಅವರಿಗೆ ರಾಜ್ಯ ಸರಕಾರ ಅತ್ಯುತ್ತಮ
ಶಿಕ್ಷಕ ರಾಜ್ಯ ಪ್ರಶಸ್ತಿ ಪ್ರಕಟವಾಗಿದೆ ಎಂದು ತಿಳಿದುಬಂದಿದೆ.

ನಾರಾಯಣ ಭಾಗ್ವತ್ ಅವರು ಕುಮಟಾ ತಾಲೂಕಿನ ಹಂದಿಗೋಣ ಗ್ರಾಮದವರು, ಇವರು ಕಳೆದ ಮೂವತ್ತೊಂದು ವರ್ಷದಿಂದ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾ, ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿಸುತ್ತಿದ್ದಾರೆ. 25 ವರ್ಷಗಳಿಗೂ ಅಧಿಕ ಕಾಲ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಬೋಧನೆ ಮಾಡಿದ್ದಾರೆ.

RELATED ARTICLES  ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಜೀವಂತ ಬದುಕಿದ್ದಾಗಲೇ 'ಭಾರತ ರತ್ನ' ನೀಡಿದ್ದರೆ, ಪ್ರಶಸ್ತಿ ಮೌಲ್ಯವೇ ಹೆಚ್ಚಾಗುತ್ತಿತ್ತು.

ಪಠ್ಯದ ಜೊತೆಗೆ ಪತ್ಯೇತರ ಚಟುವಟಿಕೆಗಳಲ್ಲೂ ಸಕ್ರೀಯರಾಗಿ ತೊಡಗಿಕೊಂಡಿರುವ ಅವರು, ಕಾವ್ಯ, ನಾಟಕ, ಚಿತ್ರ ರಚನೆ, ನಿರ್ದೇಶನ, ಗಾಯನ, ಬೇಸಗೆ ಶಿಬಿರ, ಮೇಕಪ್, ವೇಷಭೂಷಣ ಸೇರಿದಂತೆ ಅನೇಕ ಚಟುವಟಿಕೆಯಲ್ಲಿ ತೊಡಗಿಕೊಂಡವರು. ತಾಲೂಕು, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಣ ಪ್ರಶಸ್ತಿ ಜೊತೆಗೆ ರಾಜ್ಯ ಜ್ಞಾನ ಸಿಂಧು, ನೇಶನ್ ಬುಲ್ಡರ್, ಮಕ್ಕಳ ರಂಗಭೂಮಿ ಸೇವೆಗಾಗಿ ಕಸಾಪ ಪ್ರಶಸ್ತಿ, ಲಾಕ್ ಡೌನ್ ಕಾಲದಲ್ಲಿ ಮಕ್ಕಳಿಗೆ ಇ ಲರ್ನಿಂಗ್, ಮಕ್ಕಳ ಕಲಿಕೆಗೆ ಬ್ಲಾಗ್ ರಚನೆ ಕೂಡ
ತೊಡಗಿಕೊಂಡು ಗಮನ ಸೆಳೆದಿದ್ದಾರೆ ಎನ್ನಲಾಗಿದೆ.

RELATED ARTICLES  ಉತ್ತರಕನ್ನಡದಲ್ಲಿ ಇಂದು 49 ಕೋವಿಡ್ ಕೇಸ್

50ಕ್ಕೂ ಅಧಿಕ ಮಕ್ಕಳ ನಾಟಕ ನಿರ್ದೇಶನ, 15ಕ್ಕೂ ಅಧಿಕ ಶಿಕ್ಷಕರಿಗೆ ನಾಟಕ ನಿರ್ದೇಶನ ಮಾಡಿದ್ದಾರೆ. ಅನೇಕ ಕಡೆ ಸಂಪನ್ಮೂಲ ವ್ಯಕ್ತಿ ಆಗಿಯೂ ಕಾರ್ಯ ಮಾಡುತ್ತಿದ್ದಾರೆ. ಇವರ ಭಾಷಾ ಕಲಿಸುವಿಕೆಗೆ ಮಕ್ಕಳು ಆಸಕ್ತಿಯಿಂದ ತೊಡಗಿಕೊಳ್ಳುವದು ಇವರು ಕಲಿಸುವ ವಿಧಾನಕ್ಕೆ ಸಾಕ್ಷಿಯಾಗಿದೆ.

ಈ ಪ್ರಶಸ್ತಿ ನಿರೀಕ್ಷೆ ಇರಲಿಲ್ಲ. ಇದರ ಸಂಪೂರ್ಣ ಗೌರವ ಮಕ್ಕಳಿಗೆ ಸಲ್ಲುತ್ತದೆ ಹಾಗೂ ನಾನು ಇದುವರೆಗೆ ಸೇವೆ ಸಲ್ಲಿಸಿದ ಶಿಕ್ಷಣ ಸಂಸ್ಥೆಗಳಿಗೆ ಸಮರ್ಪಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡದರು ಎಂದು ವರದಿಯಾಗಿದೆ.