ದಿನದ್ 24 ಗಂಟೇಲಿ ಎಂಟು ಗಂಟೆ ಮಲಗ್ತೀವಿ. ಅಂದ್ರೆ ನಮ್ ಬದುಕಲ್ಲಿ ಮೂರನೇ ಒಂದು ಭಾಗ ಮಲ್ಗಿರ್ತೀವಿ ಅಂತಾಯ್ತು. ಅಂದ್ಮೇಲೆ ನಿದ್ದೆ ತುಂಬಾ ಮುಖ್ಯ. ಒಳ್ಳೆ ನಿದ್ದೆಯಿಂದ ನಮ್ ದೇಹಕ್ಕೆ ಒಳ್ಳೆ ರೆಸ್ಟ್ ಸಿಗೋದಷ್ಟೆ ಅಲ್ಲ, ಒಳ್ಳೆ ಆರೋಗ್ಯಕ್ಕೆ ನಿದ್ದೆ ಮುಖ್ಯ ಕೂಡ. ನಾವು ಹೇಗೆ ಮಲಗ್ತೀವಿ, ಮಲಗ್ವಾಗ ನಮ್ ಭಂಗಿ ಹೇಗಿರುತ್ತೆ ಅನ್ನೋದ್ರ ಮೇಲೆ ನಮ್ ನಿದ್ದೆಯ ಕ್ವಾಲಿಟಿ ಅವ್ಲಂಬ್ಸಿರುತ್ತೆ. ಕೆಲವು ಸಾಮಾನ್ಯ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಕೊಡೋಕೆ ಪ್ರಯತ್ನಿಸಿದ್ದೀವಿ.

1. ಭುಜ ನೋವ್ತಿದ್ರೆ ಬೆನ್ಮೇಲೆ ಮಲ್ಗೋದನ್ನ ಅಭ್ಯಾಸ ಮಾಡ್ಕೊಳಿ

ಭುಜನೋವಿದ್ರೆ ಒಂದೇ ಬದಿಗೆ ಮಲ್ಗೋದನ್ನ ಕಡಿಮೆ ಮಾಡಿ ಬೆನ್ಮೇಲೆ ಮಲ್ಗೋದನ್ನ ಅಭ್ಯಾಸ ಮಾಡ್ಕೊಳ್ಳಿ. ಹೊಟ್ಟೆ ಮೇಲೆ ಮಲ್ಗೋದ್ರಿಂದ ಕೂಡ ಭುಜನೋವು ಜಾಸ್ತಿಯಾಗತ್ತೆ. ಹಾಗಾಗಿ ಬೆನ್ ಮೇಲೆ ಮಲ್ಗೋದು ಒಳ್ಳೇದು. ತಲೆ ಕೆಳ್ಗೆ ಒಂದು ತೆಳುವಾದ ದಿಂಬು ಇಟ್ಕೊಳ್ಳಿ. ಇನ್ನೊಂದು ಚಿಕ್ ದಿಂಬನ್ನ ಹೊಟ್ಟೆ ಮೇಲೆ ಇಟ್ಕೊಂಡು ಅದನ್ನ ತಬ್ಕೊಂಡು ಮಲ್ಗೋದ್ರಿಂದ ಭುಜ ಸರಿಯಾದ ಪೊಸಿಶನ್ನಲ್ಲಿ ಇರುತ್ತೆ. ಭುಜನೋವು ಕಡಿಮೆ ಆಗುತ್ತೆ.

ನಿಮ್ಗೆ ಬೆನ್ಮೇಲೆ ಮಲ್ಗೋದು ಇಷ್ಟ ಇಲ್ದಿದ್ರೆ ಯಾವ ಭುಜ ನೋವು ಇಲ್ವೋ ಆ ಬದಿಗೆ ಮಲ್ಗಿ ನೋಡಿ. ಹೀಗೆ ಮಲಗ್ವಾಗ, ಕಾಲ್ಗಳ್ನ ಎದೆ ಕಡೆಗೆ ಎಳ್ಕೊಂಡು, ಮಂಡಿ ಮಧ್ಯೆ ಒಂದು ದಿಂಬು ಇಟೊಳ್ಳೋದು ಒಳ್ಳೇದು. ಕೈ ಮಡಚಿ ತಲೆ ಕೆಳಗೆ ದಿಂಬಿನ ಹಾಗೆ ಇಟ್ಕೊಳ್ಳೋಕೆ ಹೋಗ್ಬೇಡಿ, ಇದ್ರಿಂದ ಭುಜದ ಪೊಸಿಶನ್ ಸರಿ ಹೋಗದೆ ನೋವು ಹೆಚ್ಚಾಗುತ್ತೆ.

2. ಬೆನ್ನು ನೋವಿದ್ರೆ ಬೆನ್ ಕೆಳ್ಗೆ ದಿಂಬಿಟ್ಕೊಂಡು ಮಲ್ಕೊಳಿ

ಬೆನ್ನುನೋವಿದ್ರೆ, ನಮ್ ದೇಹದ ಉಬ್ಬು ತಗ್ಗುಗಳು ಮಲಗ್ವಾಗ್ಲೂ ಹಾಗೇ ಇರೋದು ಮುಖ್ಯ. ಅಂದ್ರೆ ಬೆನ್ ಮೇಲೆ ಮಲಗ್ವಾಗ ಬೆನ್ನಿನ “S” ಶೇಪ್ ಹಾಗೇ ಇರ್ಬೇಕು. ಬೆನ್ಮೇಲೆ ಮಲ್ಗೋದು ಒಳ್ಳೇದು. ಬೆನ್ಕೆಳಗೆ ಒಂದು ಸಣ್ಣ ಟವೆಲ್ನ ಸುತ್ತಿ ಇಟ್ಕೊಂಡ್ರೆ ಬೆನ್ನಿಗೆ ಸಪೋರ್ಟ್ ಇರುತ್ತೆ. ಮಂಡಿ ಕೆಳ್ಗೂ ಚಿಕ್ಕ ದಿಂಬು ಇಟ್ಕೊಂಡ್ರೆ ಒಳ್ಳೇದು. ಹೊಟ್ಟೆ ಮೇಲೆ ಮಲ್ಗೋದಾದ್ರೆ ಕಿಬ್ಬೊಟ್ಟೆ ಕೆಳಗೆ ಒಂದು ಚಿಕ್ಕ ದಿಂಬು ಇಟ್ಕೊಳ್ಳಿ. ಇದೆರ್ಡೂ ಬೇಡ, ಒಂದೇ ಸೈಡಿಗೆ ಮಲಗ್ತೀನಿ ಅಂದ್ರೆ, ಕಾಲನ್ನ ಎದೆ ಹತ್ತಿರ ಎಳ್ಕೊಂಡು ಮಂಡಿ ಮಧ್ಯೆ ಒಂದು ದಿಂಬಿಟ್ಕೊಳಿ.

RELATED ARTICLES  ನಿಶ್ಚಿಂತೆಯಿಂದ ನಿಮ್ಮ ಫಿಟ್‌ನೆಸ್‌ ಕಾಯಕವನ್ನು ಮುಂದುವರಿಸಬಹುದು!

3. ಕತ್ತು ನೋವಿದ್ರೆ ತಲೆದಿಂಬಿನ ಜೊತೆ ಎರ್ಡೂ ಕೈ ಕೆಳ್ಗೆ ಒಂದೊಂದು ಚಿಕ್ಕ ದಿಂಬಿಟ್ಕೊಳಿ

ಬೆನ್ನಿನ ತರಾನೇ ಕತ್ತಿಗೂ ಸಪೋರ್ಟ್ ಬೇಕು. ಆದ್ರಿಂದ ತಲೆದಿಂಬು ಇಟ್ಕೊಂಡು ಎರಡೂ ಕೈ ಕೆಳಗೆ ಒಂದೊಂದು ದಿಂಬು ಇಟ್ಕೊಳೋದು ಬೆಸ್ಟ್ ಆಪ್ಷನ್.

ನಿಮ್ಗೆ ಒಂದೇ ಬದಿಗೆ ಮಲ್ಗೋ ಅಭ್ಯಾಸ ಇದ್ರೆ, ತಲೆದಿಂಬು ಆರು ಇಂಚಿಗಿಂತ ಜಾಸ್ತಿ ಇರದ ಹಾಗೆ ನೋಡ್ಕೊಳ್ಳಿ. ನಿಮ್ಮ ದಿಂಬಿನ ಎತ್ತರ ನಿಮ್ಮ ಒಂದು ಬದಿಯ ಭುಜದ ಅಗಲದಷ್ಟಿರ್ಬೇಕು. ಹಾಗಿದ್ರೆ ಮಾತ್ರ ಕತ್ತು ಸರಿಯಾದ ಪೊಸಿಶನ್ನಿನಲ್ಲಿರುತ್ತೆ.

ಹೊಟ್ಟೆ ಮೇಲೆ ಮಲ್ಗೋರಾದ್ರೆ, ತುಂಬಾ ತೆಳ್ಳಗಿರೋ ದಿಂಬು ಇಟ್ಕೊಳ್ಳೋದು ಒಳ್ಳೇದು. ಹೊಟ್ಟೆ ಮೇಲೆ ಮಲ್ಗೋದ್ರಿಂದ ಕತ್ತಿನ ಮೇಲೆ ಒತ್ತಡ ಜಾಸ್ತಿ ಆಗುತ್ತೆ, ಹಾಗಾಗಿ ಅವಾಯ್ಡ್ ಮಾಡೋದು ಒಳ್ಳೇದು.

4. ನಿದ್ದೆ ಬರೋದು ಕಷ್ಟ ಆಗ್ತಿದ್ರೆ ಫೋನ್ ದೂರ ಎತ್ತಿಡಿ

ಕಂಪ್ಯೂಟರ್ ಮತ್ತೆ ಫೋನಿನ ಸ್ಕ್ರೀನಿಂದ ಬರೋ ಬೆಳಕು ನಿದ್ದೆ ಹಾಳು ಮಾಡುತ್ತೆ. ಮಲಗೋ ಮೊದ್ಲು ಈ ಎಲೆಕ್ಟ್ರಾನಿಕ್ ಉಪಕರಣಗಳಿಂದ ದೂರ ಇರೋದು ಒಳ್ಳೇದು. ಕಾಫಿ, ಟೀ, ಚಾಕಲೆಟ್, ಸೋಡ ಎಲ್ಲಾ ಮಲಗೋಕೆ ಆರು ಗಂಟೆ ಮೊದಲೇ ಕುಡಿದು ಬಿಡ್ಬೇಕು. ಮತ್ತೆ ಕುಡಿಯೋದನ್ನ ಅವಾಯ್ಡ್ ಮಾಡೋದು ಒಳ್ಳೇದು. ಬೆಳಗ್ಗೆ ಮತ್ತು ಸಂಜೆ ವ್ಯಾಯಾಮ ಮಾಡಿ. ಇದರಿಂದ ದೇಹದಲ್ಲಿ ರಕ್ತ ಚಲನೆ ಚೆನ್ನಾಗಿ ಆಗುತ್ತೆ. ಬೇಗ ನಿದ್ದೆ ಮಾಡೋಕೆ ಸಹಾಯ ಆಗುತ್ತೆ.

5. ನಿದ್ದೆ ಮಧ್ಯೆ ಎಚ್ಚರ ಆಗೋ ಸಮಸ್ಯೆ ಇದ್ರೆ ಬೆಡ್ರೂಮನ್ನ ತಂಪಾಗಿಡಿ

ಫೋನ್, ಲ್ಯಾಪ್ಟಾಪ್, ಟ್ಯಾಬ್ಲೆಟ್ ಪಕ್ಕಕ್ಕಿಡೋದಲ್ದೆ ಮಲಗೋ ಮೊದ್ಲು ಮದ್ಯಪಾನ ಮಾಡೋ ಅಭ್ಯಾಸ ಇದ್ರೆ ಅದನ್ನೂ ಬಿಡ್ಬೇಕು. ಆಲ್ಕೋಹಾಲಿಂದ ದೇಹದಲ್ಲಿರೋ ನೀರಿನಂಶ ಏರುಪೇರಾಗುತ್ತೆ. ಇದ್ರಿಂದ ನಿದ್ದೆ ಕೆಡುತ್ತೆ. ಹಾಗೆನೇ ಬೆಡ್ರೂಮ್ ಟೆಂಪರೇಚರ್ ಚೆಕ್ ಮಾಡಿ. ಚೆನ್ನಾಗಿ ನಿದ್ದೆ ಬರ್ಬೇಕಿದ್ರೆ ಟೆಂಪರೇಚರ್ 20-22°С ಇರ್ಬೇಕು.

RELATED ARTICLES  ಭಾರೀ ಗಾತ್ರದ ಮೂತ್ರಕಲ್ಲು ಹೊರತೆಗೆದ ವೈದ್ಯರು.

6. ಬೆಳಗ್ಗೆ ಬೇಗ ಏಳ್ಬೇಕು ಅಂದ್ರೆ ಬೇಗ ಮಲ್ಕೊಳಿ

ಬೆಳಗ್ಗೆ ಬೇಗ ಏಳ್ಬೇಕಿದ್ರೆ ರಾತ್ರಿ ಬೇಗ ಮಲಗ್ಬೇಕು. ನಿದ್ದೆ ಚೆನ್ನಾಗಾದ್ರೆ ಬೇಗ ಏಳೋದು ಸುಲಭ. ಅಲ್ಲದೆ ನೀವು ದಿನಾ ಒಂದೇ ಸಮಯಕ್ಕೆ ಏಳೋ ಅಭ್ಯಾಸ ಮಾಡ್ಕೊಂಡ್ರೆ ಒಳ್ಳೇದು. ಇವತ್ತು ರಜೆ ಅಂತ ಜಾಸ್ತಿ ಮಲಗ್ಬಿಟ್ರೆ ಮತ್ತೆ ನಾಳೆ ಸಮಯಕ್ಕೆ ಸರಿಯಾಗಿ ಏಳೋಕೆ ಕಷ್ಟ ಆಗುತ್ತೆ.

7. ಗೊರಕೆ ಸಮಸ್ಯೆ ಇದ್ರೆ ನೇರ ಮಲಗ್ಬೇಡಿ

ಬೆನ್ ಮೇಲೆ ಮಲ್ಗಿದ್ರೆ ನಾಲಗೆ ಹಿಂದಕ್ಕೆ ಹೋಗಿ ಉಸಿರಾಟಕ್ಕೆ ತೊಂದರೆ ಆಗಿ, ಗೊರಕೆ ಸಮಸ್ಯೆ ಜಾಸ್ತಿ ಆಗುತ್ತೆ. ಹಾಗಾಗಿ ಗೊರಕೆ ಸಮಸ್ಯೆ ಇದ್ರೆ ಬೆನ್ಮೇಲೆ ಮಲಗ್ಬೇಡಿ. ತಲೆದಿಂಬು ತುಂಬಾ ಮೆತ್ತಗಿದ್ರೆ ತಲೆ ಹಿಂದಕ್ಕೆ ಹೋಗಿ ಗೊರಕೆ ಜಾಸ್ತಿಯಾಗುತ್ತೆ. ಬೇಕಿದ್ರೆ ಇನ್ನೊಂದು ಎಕ್ಸ್ ಟ್ರಾ ದಿಂಬು ಇಟ್ಟು ತಲೆ ಎತ್ತರದಲ್ಲಿ ಇರೋ ಹಾಗೆ ನೋಡ್ಕೊಳ್ಳಿ.

8. ಕಾಲು ಸೆಳೆತದ ಸಮಸ್ಯೆ ಇದ್ರೆ ಮಲಗೋ ಮೊದ್ಲು ಯೋಗ, ವ್ಯಾಯಾಮ ಮಾಡಿ

ಕಾಲು ಸೆಳೆತದ ಸಮಸ್ಯೆ ತುಂಬಾ ಜನ್ರಿಗಿರುತ್ತೆ. ಇದು ಬೇರೆ ಯಾವ್ದೋ ಖಾಯಿಲೆಯ ಲಕ್ಷಣ ಆಗಿರ್ಬಹುದು. ಹಾಗಾಗಿ ಯೋಗ, ವ್ಯಾಯಾಮ ಮಾಡೀನೂ ಕಡಿಮೆ ಆಗ್ದಿದ್ರೆ ಡಾಕ್ಟರ್ ಹತ್ರ ಹೋಗಿ.

9. ಮಲಗಿರೋವಾಗ ಎದೆಯುರಿತಿದ್ರೆ ಎಡಕ್ಕೆ ಮಲಗಿ

ಎಡಕ್ಕೆ ಮಲ್ಗಿದ್ರೆ ಆಹಾರ ಅನ್ನನಾಳಕ್ಕೆ ವಾಪಾಸ್ ಹೋಗೋ ಚಾನ್ಸ್ ಇರೊಲ್ಲ. ಹಾಗಾಗಿ ಮಲಗಿರೋವಾಗ ಎದೆಯುರಿ ಬರ್ತಿದ್ರೆ ಎಡಕ್ಕೆ ಮಲಗಿ ನೋಡಿ.

ಇನ್ನೊಂದು ಸಾಮಾನ್ಯ ಸಮಸ್ಯೆ ಅಂದ್ರೆ, ರಾತ್ರಿ ಮಲಗಿರ್ವಾಗ ಕಾಲುನೋವು ಬರೋದು. ಈ ಸಮಸ್ಯೆ ಇರೋರು ಪಾದಾನ ಎತ್ತರದಲ್ಲಿರೋ ಹಾಗೆ ಕೆಳಗೆ ದಿಂಬು ಇಟ್ಕೊಂಡ್ರೆ ಅಲ್ಲಿ ಕಟ್ಕೊಂಡಿರೋ ರಕ್ತ ಸಂಚರಿಸಕ್ಕೆ ಶುರುವಾಗಿ ಕಾಲುನೋವು ಕಡಿಮೆ ಆಗುತ್ತೆ. ಮಲಗೋ ಮೊದ್ಲು ಪಾದ ಮಸಾಜ್ ಮಾಡಿ ನೋಡ್ಬಹುದು. ಹಾಗೇ, ಮಲಗೋ ಸಮಯದಲ್ಲಿ ಕಾಫಿ ಕುಡಿ