ಅಂಕೋಲಾ: ಪಟ್ಟಣದ ಕೋಟೆ ಮಾರುತಿ ದೇವಸ್ಥಾನದ ನಿರ್ಜನ ಪ್ರದೇಶದಲ್ಲಿ 23 ವರ್ಷದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾಕರಮಠದ ಬಿಗ್ ಬಾಸ್ ಸಲ್ಯೂನ್‌ನಲ್ಲಿ ಹೆರ್ ಕಟಿಂಗ್ ಕೆಲಸಕ್ಕಿದ್ದ ಉತ್ತರ ಪ್ರದೇಶ ಮೂಲದ ಸುಹೇಲ ಸಲಮಾನಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ತನ್ನ ಮೊಬೈಲ್ ನಲ್ಲಿ, ನನಗೆ ಗೊತ್ತಿಲ್ಲದೇ ಕದ್ದು ವಿಡಿಯೋ ಮಾಡಲಾಗುತ್ತಿತ್ತು. ಇದರಿಂದ ನಾನು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಮೂರು ವಿಡಿಯೋ ತುಣಕುಗಳನ್ನು ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ. ಇದೀಗ ಆ ವಿಡಿಯೋಗಳು ವೈರಲ್ ಆಗುತ್ತಿವೆ ಎನ್ನಲಾಗಿದೆ. ವಿಡಿಯೋದಲ್ಲಿ ಯಾವ ವಿಷಯದಲ್ಲಿ ಕದ್ದು ವಿಡಿಯೋ ಮಾಡಲಾಗುತ್ತಿತ್ತು ಎಂಬ ಬಗ್ಗೆ ಸ್ಪಷ್ಟತೆ ಇಲ್ಲವಾಗಿದ್ದು ತನಿಖೆಯ ನಂತರದಲ್ಲಿ ಸತ್ಯತೆ ಹೊರಗೆ ಬರಬೇಕಿದೆ.

RELATED ARTICLES  ಆನ್ ಲೈನ್ ಆಪ್ ಮೂಲಕ ಕೆಲಸ ಕೊಡಿಸೋದಾಗ ವಂಚನೆ.

ನನ್ನನ್ನು ಬ್ಲಾಕಮೇಲ್ ಮಾಡಲಾಗುತ್ತಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಿಡಿಯೋ ಮಾಡಿಕೊಂಡು ಈತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.

ಪಿಎಸೈ ಮಹಾಂತೇಶ ಹಾಗೂ ಪ್ರವೀಣಕುಮಾರ ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿ ತನಿಖೆ ಕೈಗೊಂಡಿದ್ದಾರೆ. ಇನ್ನು ಸುಹೇಲ ಸಲಮಾನಿ ಆತ್ಮಹತ್ಯಗೆ ಬ್ಲಾಕಮೇಲ್ ಮಾಡಿದ ವಿಷಯ ಯಾವುದೆಂದು ಪೊಲೀಸ್ ತನಿಖೆಯಿಂದ ಬಯಲಿಗೆ ಬರಬೇಕಿದೆ.

RELATED ARTICLES  ಹೆದರುವುದೇ ನಮ್ಮೆಲ್ಲರ ದೌರ್ಬಲ್ಯವಾಗಿದ್ದು, ಹೆದರದೇ ಮುನ್ನುಗಿದಾಗ ಯಶಸ್ಸು ಸಾಧ್ಯ : ತೇಜಸ್ವಿ ಸೂರ್ಯ

ಕಾಕರಮಠದ ಬಿಗ್ ಬಾಸ್ ಹೆರ್ ಕಟಿಂಗ್ ಸಲೂನ್ ನಲ್ಲಿ ಕಳೆದ 3 ವರ್ಷದಿಂದ ಮೃತ ಸಲಮಾನಿ ಹಾಗೂ ಅವರ ಅಣ್ಣ ಸೇರಿ ಮೂವರು ಹೇರ್ ಕಟಿಂಗ್ ಕೆಲಸಕ್ಕಿದ್ದರು. ಇವರು ಸಲೂನ್‌ನ ಮೇಲ್ಮಹಡಿಯಲ್ಲಿ ವಾಸಗಿದ್ದರು. ಶುಕ್ರವಾರ ರಾತ್ರಿ ಎಲ್ಲರೂ ಊಟ ಮಗಿಸಿ ಮಲಗಿದ್ದಾರೆ. ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಸುಲಮಾನಿ ರೂಂನಿಂದ ಹೊರ ನಡೆದು ಹೋಗಿದ್ದ ಎಂದು ಮೃತನ ಅಣ್ಣ ಪೊಲೀಸ್ ಹೇಳಿಕೆಯಲ್ಲಿ ತಿಳಿಸಿದ್ದಾನೆ.