ಮುಂಡಗೋಡ : ಹಣಕ್ಕಾಗಿ ತಾಯಿಯನ್ನ ಪೀಡಿಸುತ್ತಾ ತಾಯಿಗೆ ಬೈದು ತಾಯಿಯ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ ಪ್ರಕರಣ ಒಂದು ಬೆಳಕಿಗೆ ಬಂದಿದೆ. ತಾಲೂಕಿನ ಹುನಗುಂದ ಸಮೀಪ ಈ ಘಟನೆ ನಡೆದಿದ್ದು ಗುರುವಾರ ರಾತ್ರಿ ಅವಘಡ ನಡೆದಿದೆ ಎಂದು ತಿಳಿದುಬಂದಿದೆ. ಮಗನಿಂದ ಹಲ್ಲೆಗೊಳಗಾದ ತಾಯಿಗೆ ಕುತ್ತಿಗೆಗೆ ಬಲವಾದ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

RELATED ARTICLES  ಐಗಳಕೋರ್ವೆ ಸೇತುವೆಯ ನಿರ್ಮಾಣದ ಆರಂಭಿಕ ಹಂತದ ಕಾಮಗಾರಿ ವೀಕ್ಷಿಸಿದ ಶಾರದಾ ಶೆಟ್ಟಿ: ಜನತೆಯಿಂದ ಮಾಜಿ ಶಾಸಕರಿಗೆ ಅಭಿನಂದನೆ

ಸಲೀಂ ತೋಟದ ಈ ಕೃತ್ಯ ನಡೆಸಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ಜುಬೇದ ತೋಟದ ಹಲ್ಲೆಗೆ ಒಳಗಾದ ಮಹಿಳೆಯಾಗಿದ್ದಾಳೆ. ಸಲೀಂ ಹಣಕ್ಕಾಗಿ ತನ್ನ ತಾಯಿಯನ್ನು ಪೀಡಿಸುತ್ತಾ ಅದು ಅತಿರೇಕಕಗಕೆ ಹೋಗಿದೆ ಎನ್ನಲಾಗಿದೆ. ಅವಾಚ್ಯ ಶಬ್ದಗಳಿಂದ ತಾಯಿಯನ್ನು ನಿಂದಿಸಿದಲ್ಲದೆ ತಾಯಿಯ ಮೇಲೆ ಕುಡುಗೋಲಿನಿಂದ ಈತ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

RELATED ARTICLES  ಉತ್ತರ ಕನ್ನಡದಲ್ಲಿ ಎಲ್ಲೆಲ್ಲಿ ಎಷ್ಟು ಕೊರೋನಾ ಕೇಸ್?

ಸುದ್ದಿ ಓದಲು ಈ ಸುದ್ದಿಯನ್ನು ಕ್ಲಿಕ್ ಮಾಡಿ –  ಕಾರವಾರ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪಟ್ಟಿ ಪ್ರಕಟ : ಕುಮಟಾದ ಮೂವರು ಆಯ್ಕೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ. ಪೋಲಿಸ್ ತನಿಖೆ ನಂತರದಲ್ಲಿ ಘಟನೆಯ ಸಂಪೂರ್ಣ ಮಾಹಿತಿ ತಿಳಿದು ಬರಬೇಕಿದೆ.