ಸಿದ್ದಾಪುರ: ಪಟ್ಟಣದ ಶ್ರೀರಾಘವೇಂದ್ರ ಮಠದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿದ್ದ ವಿಠಲ ಶಾನಭಾಗ ಗುರುವಾರ ಮಧ್ಯಾಹ್ನ ಊಟಮಾಡಿ ಮಲಗಿದ್ದ ಸಂದರ್ಭದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಗ್ರಾಹಕರ ಸೇವಾ ಸಹಕಾರಿ ಸಂಘದಲ್ಲಿ ಅಕೌಟೆಂಟ್ ಆಗಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ದಿವಂಗತರು ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಶ್ರೀರಾಘವೇಂದ್ರ ಮಠದ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿದ್ದರು.

RELATED ARTICLES  ಮಾಸ್ಕ್ ಇಲ್ಲದೆ ಓಡಾಡುವ ಮುನ್ನ ಹುಷಾರ್...!

ಸುದ್ದಿ ಓದಲು ಸುದ್ದಿಯ ಮೇಲೆ ಕ್ಲಿಕ್ ಮಾಡಿ – ವಿಡಿಯೋ ಮಾಡಿಕೊಂಡು ಸ್ಯೂಸೈಡ್ ಮಾಡಿಕೊಂಡ ಯುವಕ : ವಿಡಿಯೋದಲ್ಲಿ ಹೇಳಿದ್ದೇನು?

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಓರ್ವ ಮಗಳು ಸೇರಿದಂತೆ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ. ವಿಠಲ ಶಾನಭಾಗರು ಶ್ರೀರಾಘವೇಂದ್ರ ಮಠಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ಶ್ರೀಮಠದ ಉತ್ಕರ್ಷಕ್ಕೆ ಕಾರಣರಾಗಿದ್ದರು. ಅವರ ಅಗಲುವಿಕೆ ಶ್ರೀಮಠದ ದೃಷ್ಟಿಯಿಂದ ತುಂಬಲಾರದ ನಷ್ಟವನ್ನುಂಟು
ಮಾಡಿದೆ ಎನ್ನಲಾಗಿದೆ.

RELATED ARTICLES  ಕರ್ಕಿ ಕಡಲು ಕೊರೆತ ಸ್ಥಳಕ್ಕೆ ನಿವೇದಿತ್ ಆಳ್ವ