ಅಂಕೋಲಾ: 99 ವರ್ಷಗಳ ತುಂಬು ಜೀವನ ನಡೆಸಿದ್ದ, ತಾಲೂಕಿನ ಕಣಗಿಲ ನಿವಾಸಿ ಹಿರಿಯ ಜೀವ ನಾಗಮ್ಮ ವಾಸು ನಾಯಕ ಆಕಸ್ಮಿಕವಾಗಿ ನಿಧನರಾಗಿದ್ದಾರೆ. ನಾಗಮ್ಮ ನಾಯಕ ಅವರು ಶಿಕ್ಷಣದ ಕುರಿತಾಗಿ ವಿಶೇಷ ಒಲವು ಇದ್ದವರಾಗಿದ್ದರು. ತನ್ನ ಮಕ್ಕಳಷ್ಟೇ ಅಲ್ಲ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕೆಂಬ ಹಂಬಲ ಇವರದಾಗಿತ್ತು.

ನೆರೆಹೊರೆಯವರಿಗೆ ಉಣಬಡಿಸಿದ ತಾಯಿ ನಾಗಮ್ಮ ನಾಯಕ ಎನ್ನುತ್ತಾರೆ ಗ್ರಾಮಸ್ಥರು. ನಾಗಮ್ಮ ನಾಯಕ ಎಲ್ಲರನ್ನು ಪ್ರೀತಿಸುತ್ತಿದ್ದರು. ಕುಟುಂಬದಲ್ಲಿ ಓರ್ವ ಆದರ್ಶ ಗ್ರಹಿಣಿಯಾಗಿ ಸುಸಂಸ್ಕೃತ ಮಹಿಳೆಯಾಗಿ ಸಂಸ್ಕಾರವನ್ನು ಕಲಿಸಿದ್ದರು.

RELATED ARTICLES  ಓಪನ್ ಆದವು ಲಿಂಗನಮಕ್ಕಿ ಡ್ಯಾಮ್ ನ ಹನ್ನೊಂದು ಗೇಟ್ ಗಳು : ಶರಾವತಿ ನದಿ ತಟದ ಜನತೆಗೆ ಆತಂಕ!

ಈ ಸುದ್ದಿಯನ್ನೂ ಓದಲು ಈ ಸುದ್ದಿಯ ಲಿಂಕ್ ಒತ್ತಿ – ಸೃಜನ ಶೀಲ ಶಿಕ್ಷಕ ನಾರಾಯಣ ಭಾಗ್ವತ್ ರಿಗೆ ರಾಜ್ಯ ಉತ್ತಮ‌ ಶಿಕ್ಷಕ ಪುರಸ್ಕಾರ

RELATED ARTICLES  ಕಡಿಮೆ ಬೆಲೆಗೆ ಕಾರು ಕೊಡಿಸೋದಾಗಿ ನಂಬಿಸಿ ಮೋಸ ಮಾಡ್ತಾರೆ ಹುಷಾರ್..!

ತನ್ನ ಇಳಿ ವಯಸ್ಸಿನಲ್ಲಿಯೂ ಕ್ರೀಯಾಶೀಲತೆಯಿಂದ ಇದ್ದ ಇವರು ತನ್ನ 99 ವರ್ಷಗಳನ್ನು ಆರೋಗ್ಯಪೂರ್ಣವಾಗಿ ಕಳೆದಿದ್ದರು. ಮೃತರು ಜಿ ಸಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಕೆ ವಿ ನಾಯಕ ಮತ್ತು ಮಗಳು ಸುಮನಾ ನಾಯಕ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.