ಅಂಕೋಲಾ: ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಸೆ. 9 ರಿಂದ 11ರ ವರೆಗೆ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಜಿಲ್ಲೆಯ 3 ಅಥೇಟ್ಸ್‌ಗಳು
ಅರ್ಹತೆಯನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಹ್ಯಾಮರ್‌ನಲ್ಲಿ ನೂತನ ದಾಖಲೆಯನ್ನು ಬರೆದ ಯಶಸ್ ಪಿ. ಕುರುಬರ್, 200 ಮೀ. ವಿಭಾಗದಲ್ಲಿ ನಯನಾ ಜಿ.ಕೆ. ಮತ್ತು ಜಾವೆಲಿನ್ ಥೋ ವಿಭಾಗದಲ್ಲಿ ಅಭಿನಂದನ ಎಸ್. ನಾಯಕ ಆಯ್ಕೆಯಾಗಿರುವ
ಕ್ರೀಡಾಪಟುಗಳು ಎಂದು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ (DAAUK) ಕಾರ್ಯದರ್ಶಿ ಕೆ.ಆರ್‌. ನಾಯಕ ಬೇಲೇಕೇರಿ ಹಾಗೂ ಅಧ್ಯಕ್ಷ ಸದಾನಂದ ನಾಯ್ಕ ಸಂಸ್ಥೆಯ ಪ್ರಕಟಣೆಯಲ್ಲಿ ಅಧಿಕೃತ ತಿಳಿಸಿರುತ್ತಾರೆ.

RELATED ARTICLES  ನದಿಪಾತ್ರಗಳಲ್ಲಿನ ಮರಳು ದಿಬ್ಬಗಳಿಂದ ಮರಳು ತೆಗೆಯುವಿಕೆ ಹಾಗೂ ಸಾಗಾಣಿಕೆಗೆ ಬ್ರೇಕ್..! ಜಿಲ್ಲಾಧಿಕಾರಿಗಳ ಆದೇಶ.

ಈ ಆಯ್ಕೆ ಪ್ರಕ್ರೀಯೆಯನ್ನು ಎ.ಎಫ್.ಐ.ನ ಕ್ರೀಡಾಪಟುಗಳ ಅರ್ಹತಾ ಮಾನದಂಡವನ್ನು ಆಧರಿಸಿ ಕರ್ನಾಟಕ ರಾಜ್ಯ ಆಥ್ಲೆಟಿಕ್ಸ್ ಸಂಸ್ಥೆ ಬೆಂಗಳೂರು ಇವರು ಮಾಡಿದ್ದಾರೆ ಎನ್ನಲಾಗಿದೆ. ಇವರ ಆಯ್ಕೆಗೆ ಜಿಲ್ಲೆಯ ಕ್ರೀಡಾಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ ಎಂದು ವರದಿಯಾಗಿದೆ.

RELATED ARTICLES  ಉತ್ತರ ಕನ್ನಡದಲ್ಲಿ ಎಸ್.ಎಸ್.ಎಲ್‌ ಸಿ ಪರೀಕ್ಷೆಗೆ ಸಕಲ ಸಿದ್ಧತೆ