ಹೊನ್ನಾವರ : ರಾತ್ರಿ ನಾಟಕದಲ್ಲಿ ಪಾತ್ರ ಮಾಡಿದ್ದ ವ್ಯಕ್ತಿ ಬೆಳಿಗ್ಗೆ ಹೃದಯಘಾತದಿಂದ ನಿಧನ ಹೊಂದಿದ ಮನ ಕಲಕುವ ಘಟನೆ ಹೊನ್ನಾವರ ತಾಲೂಕಿನ ಮೂಡ್ಕಣಿಯಲ್ಲಿ ನಡೆದಿದೆ. ತಾಲೂಕಿನ ಮೂಡ್ಕಣಿಯ ಉದಯ ನಾಯ್ಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ಮೂಡ್ಕಣಿಯ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ನಡೆದ ನಾಟಕದಲ್ಲಿ ಇವರು ಪಾತ್ರನಿರ್ವಹಿಸಿದ್ದರು. ತಮ್ಮ ಕಲಾ ಪ್ರತಿಭೆಯನ್ನು ಮೆರೆದು ಪ್ರೇಕ್ಷಕರ ಮನ ಗೆದ್ದಿದ್ದ ಉದಯ ನಾಯ್ಕ ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರಲಿದ್ದಾರೆ.

RELATED ARTICLES  ಭಟ್ಕಳದಲ್ಲಿ ಪೊಲೀಸ್ ದಾಳಿ : PFI ಸಂಘಟನೆಯ ಸದಸ್ಯರ ಮೇಲೆ ದಾಳಿ ಮುಂದುವರೆಸಿದ ಪೊಲೀಸರು.

ಅನೇಕ ನಾಟಕಗಳಲ್ಲಿ ಖಳನಾಯಕ ಕಥಾನಾಯಕನ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಅತ್ಯದ್ಭುತ ಕಲಾವಿದ ಉದಯ ತಮ್ಮ ಕಲಾ ಸಿರಿವಂತಿಕೆಯ ಮೂಲಕವೇ ಅನೇಕ ಜನ ಪ್ರೇಕ್ಷಕರ ಮನೆಗೆದ್ದಿದ್ರು ಸಹೋದರ ಸತೀಶ ಹಾಗೂ ವಿನಾಯಕ ಜೊತೆ ಪಾತ್ರ ಮಾಡಿದ್ದ ಉದಯ, ವೃತ್ತಿಯಲ್ಲಿ ಕೃಷಿಕನಾಗಿದ್ದು ಜೆಸಿಬಿ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

RELATED ARTICLES  ವಿದ್ಯಾರ್ಥಿ ನಿಲಯದಲ್ಲಿ ಮಾನ್ಯ ಶಾಸಕರಿಂದ ವನಮಹೋತ್ಸವ ಕಾರ್ಯಕ್ರಮ.

ರಾತ್ರಿಯ ನಾಟಕದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದ ಉದಯ ಬೆಳ್ಳಂಬೆಳಗ್ಗೆ ಇಲ್ಲವಾಗಿದ್ದು, ಅವರ ಅಭಿಮಾನಿಗಳಲ್ಲಿ ಹಾಗೂ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ. ಇವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲೆಂದು ಅವರ ಹಿತೈಷಿಗಳು ಹಾಗೂ ಬಂಧುಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.