ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ.ಎಂದು ನಾಗರಾಜ ನಾಯಕ ನುಡಿದರು.
ಶ್ರೀ ಯುವಶಕ್ತಿ ಯುವಕಸಂಘ, ಬಂಕಿಕೊಡ್ಲ ಮತ್ತು ಸಾರ್ವಜನಿಕ ದಸರಾ ಉತ್ಸವ ಸಮಿತಿ, ಬಂಕಿಕೊಡ್ಲ ಇವರ ಆಶ್ರÀಯದಲ್ಲಿ ದಸರಾ ಉತ್ಸವದ ಪ್ರಯುಕ್ತ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬಂಕಿಕೊಡ್ಲದ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉಧ್ಘಾಟಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಹಿಂದುಳಿದ ಜನರೇ ಇರುವ ಇಂತಹ ಹಿಂದುಳಿದ ಪ್ರದೇಶದಲ್ಲಿ ಸತತ 5ನೇ ವರ್ಷ ಅತ್ಯಂತ ಅದ್ಧೂರಿಯಾಗಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕ್ರತಿಕ ಹಾಗೂ ಪ್ರತಿಭಾ ಪ್ರೋತ್ಸಾಹದಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ಮಾತಿನಂತೆ ನಾವು ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಹಾಗಾಗಿ ನಾವೆಲ್ಲ ನಮ್ಮ ಧರ್ಮ,ಸಂಸ್ಕ್ರತಿಯನ್ನು ರಕ್ಷಿಸಿ ಉಳಿಸಿ ಬೆಳೆಸಬೇಕು ಎನ್ನುತ್ತ ಇತ್ತೀಚೆಗೆ ಅಗಲಿದ ಹಾಲಕ್ಕಿ ಸಮಾಜದ ಪತ್ರಕರ್ತ ದಿ/ ವೆಂಕಟೇಶ ಗೌಡ ಅವರನ್ನು ಸ್ಮರಿಸುತ್ತ ಆತ ಪ್ರತಿಭಾವಂತನಾಗಿದ್ದು ಆತನ ಅಗಲಿಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಎಂದು ಆತನ ಆತ್ಮಕ್ಕೆ ಚಿರಶಾಂತಿ ಕೋರಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ದಿನಕರ ಶೆಟ್ಟಿ ಅವರು ಮಾತನಾಡಿ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೂ ಹೆಚ್ಚಿನ ಅಧ್ಯತೆ ನೀಡಬೇಕು ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಇನ್ನೋರ್ವ ಅತಿಥಿ ಸೂರಜ ಸೋನಿ ಅವರು ಮಾತನಾಡಿ ಈ ಭಾಗದಲ್ಲಿ ಎಲ್ಲಾ ರೀತಿಯ ಕಲೆಗಳು ಅಡಕವಾಗಿದ್ದು ಅದನ್ನು ಪೋಷಿಸಿ ಬೆಳೆಸುವ ಕೆಲಸವಾಗಬೇಕು ಎಂದರು. ಇದೇ ವೇದಿಕೆಯಲ್ಲಿ ಕೃಷಿಕರಾದ ಹೊನ್ನಪ್ಪ ಗೌಡ, ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾಪಟು ಸಂತೋಷ ಗೌಡ, ಎಸ್.ಎಸ್‍ಎಲ್.ಸಿ.ಯಲ್ಲಿ 90% ಕ್ಕಿಂತ ಹೆಚ್ಚು ಅಂಕಗಳಿಸಿದ ಅಶ್ವಿನಿ ಗೌಡ, ಯಶೋದಾ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀರಣ್ಣ ಮಾಸ್ತರ ಅಡಿಗೋಣ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಮಂಜುನಾಥ ಜನ್ನು, ಮನೋಹರ್ ಗೌಡ, ಶ್ರೀನಿವಾಸ ನಾಯಕ, ರಾಮಚಂದ್ರ ಮಾಸ್ತರ, ಸಂಘದ ಅಧ್ಯಕ್ಷ ರಾಜೇಂದ್ರ ಗೌಡ, ದೇವಾನಂದ ಗೌಡ, ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.