ಕುಮಟಾ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬ್ರಹತ್ ಕಟ್ಟಡದ ಮೇಲಿನಿಂದ ಮೂರನೇ ಮಹಡಿಯಿಂದ ಆಯತಪ್ಪಿ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ.

ಈತ ಪಟ್ಟಣದ ದಾಸ್ ಕಾಂಪ್ಲೆಕ್ಸ್‌ನ ಮಹಡಿಯಲ್ಲಿ ಡಿ.ಟಿ.ಎಚ್ ಸರಿಪಡಿಸುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಮೂರನೆಯ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಕುಮಟಾ ಪಟ್ಟಣದಲ್ಲಿ ಸಂಭವಿಸಿದೆ. ತಾಲೂಕಿನ ಹೆಗಡೆಯ ಪಂಚರಬೇಣದ ದತ್ತಾ ಶಾನಭಾಗ ಮೃತ ದುರ್ದೈವಿ.

RELATED ARTICLES  ಎದೆ ಬಡಿತ ಹೆಚ್ಚಿಸುವ ಕ್ರೀಡೆ ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ.

ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಪ್ರಕ್ರಿಯೆ ಕೈಗೊಂಡಿದ್ದಾರೆ. ಮನೆಯಲ್ಲಿ ಆಧಾರ ಸ್ಥಂಭವನ್ನು ಕಳೆದುಕೊಂಡವರ ಆಕ್ರಂದನ ಮುಗಿಲುಮುಟ್ಟಿದೆ.

RELATED ARTICLES  ಭೀಷ್ಮರ ನಿಜವಾದ ಹೆಸರು ಗೊತ್ತಾ? ಭೀಷ್ಮ ಎಂಬ ಹೆಸರು ಬಂದಿದ್ದು ಹೇಗೆ?