ಸಿದ್ದಾಪುರ: ಅದಾವುದೋ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡ ಕಾಲೇಜು ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಸಿದ್ದಾಪುರ ತಾಲೂಕಿನ ಹಲಸಗಾರಿನಲ್ಲಿ ನಡೆದಿದೆ. ಘಟನೆಯ ತನಿಖೆಯ ನಂತರದಲ್ಲಿ ನಿಖರವಾದ ಕಾರಣ ತಿಳಿದು ಬರಬೇಕಿದೆ. ಕೋಲಸಿರ್ಸಿ ಸರ್ಕಾರಿ ಪಿ.ಯು ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ ಜಯಸೂರ್ಯ ಮಂಜುನಾಥ ನಾಯ್ಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎನ್ನಲಾಗಿದೆ.

RELATED ARTICLES  ನವೆಂಬರ್ 17 ರ ವರೆಗೆ ಮತ್ತೆ ಮಳೆ ಸಾಧ್ಯತೆ : ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ

ಅನಾರೋಗ್ಯ ಹಾಗೂ ಲವ್ ಫೆಲ್ಯುವರ್ ಆಗಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ಈ ರೀತಿ ಮಾಡಿಕೊಂಡಿರ ಬಹುದಾಗಿ ಸುದ್ದಿಗಳು ಕೇಳಿಬರುತ್ತಲಿದೆ. ಕಳೆದ ಕೆಲ ದಿನಗಳಿಂದ ಈತನಿಗೆ ವಿಪರೀತ ತಲೆ ನೋವು ಕಾಣಿಸಿಕೊಂಡು ಶಿರಸಿಯ ರೋಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು ಎನ್ನಾಲಗಿದೆ.

RELATED ARTICLES  ಕೆಎಲ್‍ಇ ಮಹಾವಿದ್ಯಾಲಯದಲ್ಲಿ ಆರೋಗ್ಯ ಸಭಾ ಕಾರ್ಯಕ್ರಮ

ಈತ ಮನನೊಂದು ಮನೆಯ ಸ್ಲ್ಯಾಬಿನ ಕಬ್ಬಿಣದ ರಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅತ್ಯುತ್ತಮ ಕ್ರೀಡಾಪಟುವಾಗಿದ್ದ ಜಯಸೂರ್ಯನ ಅಕಾಲಿಕ ಸಾವಿಗೆ ಸ್ನೇಹಿತರು, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕಂಬನಿ ಮಿಡಿದಿದ್ದಾರೆ.