ನಮ್ಮ ಕುಮಟಾ ಪೊಲೀಸರ ಗ್ರಹಚಾರವೇ ಸರಿ ಇಲ್ಲವೆನೋ ಅನ್ನಿಸುತ್ತದೆ. ಪದೇ ಪದೇ ಕುಮಟಾದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಲೇ ಇದ್ದಾರೆ. ಹೌದು, ಮೊನ್ನೆಯಷ್ಟೆ ಕುಮಟಾದ ಪೋಸ್ಟಲ್ ಕಾಲನಿಯಲ್ಲಿ ಸರಣಿ ಕಳ್ಳತನ ನಡೆದಿತ್ತು, ಮತ್ತೆ ಶುಕ್ರವಾರ ರಾತ್ರಿ ಕುಮಟಾದ ಮಾಸ್ತಿಕಟ್ಟೆಯ ಸಮೀಪ ಇರುವ “ಮಹಾಸತಿ ಜ್ಯುವೇಲ್ಲರಿ ವರ್ಕ್ಸ್” ನಲ್ಲಿ ಕಳ್ಳತನ ನಡೆದಿದೆ. ಅಂಗಡಿಯ ಗೋಡೆಗೆ ರಂದ್ರ ಕೊರೆದು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಪದೇ ಪದೇ ನಡೆಯುತ್ತಿರವ ಈ ಕಳ್ಳತನ  ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಪೊಲೀಸ್ ಇಲಾಖೆ ಇಂತ ಪ್ರಕರ್ಣಗಳಿಗೆ ಬ್ರೇಕ್ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ‌.

RELATED ARTICLES  ಸರಣಿ ಅಪಘಾತ : ಇಬ್ಬರ ಸಾವು : ಮೂವರಿಗೆ ಪೆಟ್ಟು