ಕುಮಟಾ: ಮೊರಾರ್ಜಿ ಶಾಲೆ ಹೆಗಡೆಯಲ್ಲಿ ಜರುಗಿದ ತಾಲೂಕಾ ಮಟ್ಟದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಹರ್ಡಲ್ಸ್‌ನಲ್ಲಿ ಹುಡುಗಿಯರ ವಿಭಾಗದಲ್ಲಿ ಯೋಗಿತಾ ನಾಯ್ಕ, ಹುಡುಗರ ವಿಭಾಗದಲ್ಲಿ ಧೀರಜ್ ನಾಯ್ಕ, ಚೆಸ್‍ನಲ್ಲಿ ಪ್ರಣವ್ಯಾ ಕಡೂರ ಹಾಗೂ ಪ್ರಣತ್ ಕಡೂರ, ಯೋಗದಲ್ಲಿ ಇಂಚರಾ ಭಂಡಾರಿ ಹಾಗೂ ಮಾನ್ಯ ಶೇಟ ಇವರುಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

RELATED ARTICLES  ಸಿದ್ಧಗಂಗಾ ಶ್ರೀಗಳ ೧೧೧ನೇ ಜನ್ಮದಿನ: ೧೧೧ ಮಲೆನಾಡ ಗಿಡ್ಡ ಗೋವುಗಳನ್ನು ದತ್ತು ಪಡೆದ ರಾಘವೇಶ್ವರ ಶ್ರೀಗಳು

ಈ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಾಧ್ಯಾಪಕರು, ಹಾಗೂ ಶಿಕ್ಷಕ ವರ್ಗ ಅಭಿನಂದನೆ ಸಲ್ಲಿಸಿ, ಮುಂದಿನ ಹಂತದ ಸ್ಪರ್ಧೆಗೆ ಶುಭ ಕೋರಿದ್ದಾರೆ.

RELATED ARTICLES  ಲಿಂಗಾಯತ ಸಮಾಜಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವ' ಕುರಿತಾದ ನಿರ್ಣಯವನ್ನು ರದ್ದುಗೊಳಿಸಲು ಮನವಿ‌ ಸಲ್ಲಿಕೆ