ಮುರ್ಡೇಶ್ವರ: ಮುರ್ಡೇಶ್ವರದ ಪುಷ್ಕರಣಿಯ ಹತ್ತಿರದಲ್ಲಿ ಮುರ್ಡೇಶ್ವರ ನಾಗರಿಕರು ಡಾ.ಆರ್.ಎನ್.ಶೆಟ್ಟಿಯವರ ಗೌರವಾರ್ಥ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ
ಅನಾವರಣಗೊಳಿಸಲಾಯಿತು ಎಂದು ತಿಳಿದುಬಂದಿದೆ.

ಮುರ್ಡೇಶ್ವರದ ಓಲಗ ಮಂಟಪದಲ್ಲಿ ನಡೆಯುತ್ತಿರುವ ಗಣೇಶೋತ್ಸವ ಸಮಯದಲ್ಲಿ ಗಣಹೋಮ, ಸಾರ್ವಜನಿಕ ಅನ್ನ ಸಂತರ್ಪಣೆಯ ಕಾರ್ಯಕ್ರಮ ನಡೆಸಲಾಗಿದ್ದು,
ಓಲಗ ಮಂಟಪದ ಪಕ್ಕದಲ್ಲಿರುವ ಪುಷ್ಕರಣಿಯ ಆವರಣದಲ್ಲಿ ನಿರ್ಮಿಸಲಾದ ಡಾ.ಆರ್.ಎನ್. ಶೆಟ್ಟಿಯವರ ಮೂರ್ತಿಯನ್ನು ಶಾಸಕ ಸುನಿಲ್ ನಾಯ್ಕ ಅನಾವರಣಗೊಳಿಸಿದರು ಎನ್ನಲಾಗಿದೆ.

RELATED ARTICLES  ಗೋಕರ್ಣದಲ್ಲಿ ಖಾಸಗಿ ವಸತಿಗೃಹದ ಮೇಲೆ ಪೊಲೀಸ್ ದಾಳಿ.

ಈ ಸಂದರ್ಭದಲ್ಲಿ ಆರ್.ಎನ್. ಶೆಟ್ಟಿಯವರ ಪುತ್ರ ಸತೀಶ ಶೆಟ್ಟಿ, ನಾಗರಿಕ ವೇದಿಕೆಯ ಅಧ್ಯಕ್ಷ ಎಸ್.ಎಸ್.ಕಾಮತ್, ಊರಿನ ಪ್ರಮುಖರಾದ ಕೃಷ್ಣಾ ನಾಯ್ಕ, ಈಶ್ವರ ದೊಡ್ಡನೆ, ನಾಮಧಾರಿ ಸಮಾಜದ ಅಧ್ಯಕ್ಷ ಸುಬ್ರಾಯ ನಾಯ್ಕ, ಮಾವಳ್ಳಿ-2 ಗ್ರಾ.ಪಂ.ಅಧ್ಯಕ್ಷ ಮಹೇಶ ನಾಯ್ಕ, ಶಂಕರ ಮಠದಹಿತ್ತು, ರಾಮಾ ಅಜ್ಜ ನಾಯ್ಕ, ಸತೀಶ ಶೇಟ್, ಎನ್.ಎಸ್.ಭಟ್ರಹಿತ, ಸಣಕೂಸ ನಾಯ್ಕ ಸೇರಿದಂತೆ ಊರ ನಾಗರಿಕರು ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ.

RELATED ARTICLES   ಇ– ಎಫ್‌ಎಮ್‌ಎಸ್ ಮೂಲಕವೇ ವೇತನ ಪಾವತಿ ಮಾಡಲು ಮನವಿ

ಪ್ರತಿಮೆ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯಗಳನ್ನು ಮುಡೇಶ್ವರದ ದೇವಸ್ಥಾನದ ಪ್ರಧಾನ ಅರ್ಚಕ ಜಯರಾಮ ಅಡಿಗಳ ಮತ್ತು ಇತರ ಅರ್ಚಕ ವೃಂದ ನೆರವೇರಿಸಿತು ಎಂದು ವರದಿಯಾಗಿದೆ.