ಭಟ್ಕಳ: ಉತ್ತರ ಕನ್ನಡಜಿಲ್ಲೆಯ ಮೊಗೇರ ಸಮಾಜದವರಿಗೆ ನೀಡುತ್ತಿರುವ ಪ್ರವರ್ಗ 1ರ ಪ್ರಮಾಣ ಪತ್ರ ಸ್ಥಗಿತಗೊಳಿಸಿ ಈ ಹಿಂದಿನಂತೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಮೊಗೇರ ಸಮಾಜದ ವತಿಯಿಂದ ಭಟ್ಕಳದಲ್ಲಿ ನಡೆಯುತಿರುವ 166ನೆ ದಿನದ ಧರಣಿ ಸಂಧರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಎಫ್.ಕೆ.ಮೊಗೇರ್ ಅವರು ನಮ್ಮ ಮೊಗೇರ ಸಮುದಾಯಕ್ಕೆ ಸರ್ಕಾರದಿಂದ ಎಸ್.ಸಿ ಪ್ರಮಾಣ ನೀಡಲು ವಿಳಂಬವಾಗುತ್ತಿರುವುದಕ್ಕೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ, ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕುತಂತ್ರವೇ ಕಾರಣ ಎಂದು ಆರೋಪಿಸಿದರು.

ಕಳೆದ 5 ತಿಂಗಳುಗಳಿಂದ ನಿರಂತರ ನಾವು ಹೋರಾಟ ನಡೆಸುತ್ತಿದ್ದರು , ಜಿಲ್ಲಾ ಉಸ್ತುವಾರಿ ಮಂತ್ರಿ ಶ್ರೀನಿವಾಸ ಪೂಜಾರಿ ಅವರು ನಮ್ಮನ್ನು ಕಡೆಗಣಿಸುತ್ತಿದ್ದಾರೆ. ನಮ್ಮ ಸಮಾಜದ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಶ್ರೀನಿವಾಸ್ ಪೂಜಾರಿ ಅವರು ಭಟ್ಕಳ ತಾಲೂಕಿನಲ್ಲಿಯೇ ಹಲವಾರು ಕಾರ್ಯಕ್ರಮದ ನಿಮಿತ್ತ ಇಲ್ಲಿಯೇ ಸುತ್ತುತ್ತಿದ್ದರು ನಮ್ಮ ಅಹವಾಲು ಅಲಿಸಲು ಬರುತ್ತಿಲ್ಲ. ಸರಕಾರ ಸಮಿತಿ ರಚಿಸಿ ತಿಂಗಳುಗಳು ಕಳೆದರು ಒಬ್ಬರೇ ಒಬ್ಬರು ಸಮಿತಿ ಸದಸ್ಯರು ಇದುವರೆಗೆ ಬಂದು ಅವರ ಕೆಲಸ ಶುರು ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಕೂಟ ಶ್ರೀನಿವಾಸ ಪೂಜಾರಿ ಅವರು ಈ ಸಮಿತಿ ರಚನೆ ಮಾಡಿ , ವಿಳಂಬ ನೀತಿ ಅನುಸರಿಸಿ ಕುತಂತ್ರದಿಂದ ನಮ್ಮ ಸಮಾಜದ ಹೋರಾಟವನ್ನು ಹತ್ತಿಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ನಾವು ಮುಖ್ಯಮಂತ್ರಿ ಅವರಿಗೆ ಮನವಿ ನೀಡಿ ಕೇಳಿದರೆ ಅವರು ಸಮಾಜ ಕಲ್ಯಾಣ ಖಾತೆ ಸಚಿವ ಶ್ರೀನಿವಾಸ ಪೂಜಾರಿ ಅವರಿಗೆ ನಿಮ್ಮ ಸಮಸ್ಯೆ ಪರಿಹರಿಸಿ ನಿಮಗೆ ನ್ಯಾಯ ಒದಗಿಸಲು ತಿಳುಸಿದ್ದೇನೆ, ಅವರನ್ನು ಭೇಟಿಯಾಗಲು ತಿಳಿಸಿದ್ದಾರೆ , ಆದರೆ ಕಳೆದ 1 ತಿಂಗಳಿನಿಂದ ಸಚಿವ ಶ್ರೀನಿವಾಸ ಪೂಜಾರಿ ಅವರು ನಮಗೆ ಭೇಟಿಯಾಗಲು ದಿನಾಂಕ ಹಾಗೂ ಸಮಯ ನೀಡದೆ ಸತಾಯಿಸುತ್ತಿದ್ದಾರೆ ಎಂದು ತಿಳಿಸಿದರು.

RELATED ARTICLES  ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯಿಂದ ವಿದ್ಯಾರ್ಥಿವೇತನ ವಿತರಣೆ.

ಮೊಗೇರ ಸಮಾಜದವರಿಗೆ ಈ ಹಿಂದೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದ್ದು, ಸರಕಾರ ಮೊಗೇರರಿಗೆ ಪ್ರಸಕ್ತ ಮನೆಮನೆ ದಾಖಲಾತಿ ಒದಗಿಸುವ ಸಂದರ್ಭದಲ್ಲಿ ಪ್ರವರ್ಗ 1ರ ಪ್ರಮಾಣ ಪತ್ರ ನೀಡಲು ಸರಕಾರ ಮುಂದಾಗಿದೆ. ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದ ಮೊಗೇರರಿಗೆ ಪ್ರವರ್ಗ 1ರಲ್ಲಿ ಪ್ರಮಾಣ ಪತ್ರ ನೀಡುವುದಕ್ಕೆ ಸಮಾಜದಿಂದ ತೀವ್ರ ವಿರೋಧವಿದೆ. ನಾವು ಈಗಾಗಲೇ ಪ್ರವರ್ಗ 1ರ ಪ್ರಮಾಣ ಪತ್ರವನ್ನು ಕಂದಾಯ ಇಲಾಖೆಗೆ ವಾಪಸ್ ನೀಡಿದ್ದೇವೆ. ನಮಗೆ ಸರಕಾರ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನೇ ನೀಡಬೇಕು. ನಮಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ತಿಳಿಸಿದರು.

RELATED ARTICLES  ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಗಣೇಶ ಚೌತಿ ಉತ್ಸವ ಪ್ರಾರಂಭ