ದಾಂಡೇಲಿ: ನಗರ ಹಾಗೂ ನಗರದ ಸುತ್ತಮುತ್ತಲು ಎಲ್ಲಿ ಹಾವು ಬಂದರೂ, ಮಾಹಿತಿ ದೊರೆತ ತಕ್ಷಣವೆ ಓಡೋಡಿ ಬರುತ್ತಿದ್ದ ನಗರದ ಉರಗಪ್ರೇಮಿ ರಾಘವೇಂದ್ರ ವಿ.ನಾಯಕ ಅವರು ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ವಿಧಿವಶರಾದರು. ಮೃತರಿಗೆ 40 ವರ್ಷ ವಯಸ್ಸಾಗಿತ್ತು. ಹಳೆದಾಂಡೇಲಿಯ ಅರಣ್ಯ ಡಿಪೋ ಹತ್ತಿರ ನಿವಾಸಿಯಾಗಿದ್ದ ರಾಘವೇಂದ್ರ.ವಿ.ನಾಯಕ ಅವರು ವೃತ್ತಿಯಲ್ಲಿ ವಾಹನ ಚಾಲಕರಾಗಿದ್ದರು.

RELATED ARTICLES  ಮುಖ್ಯ ಶಿಕ್ಷಕರು ಪಾಲಕರ ನಡುವೆ ಘರ್ಷಣೆ! ಮುಖ್ಯ ಶಿಕ್ಷಕರಿಂದ ಕೇಳಿಬಂದಿದೆ ಧರ್ಮಪ್ರಹಾರದ ಮಾತು. ಮಿರ್ಜಾನ್ ಉರ್ದು ಶಾಲೆಯಲ್ಲಿ ನಡೀತಿರೋದಾದ್ರೂ ಏನು?

ಕಳೆದ ಕೆಲವು ವರ್ಷಗಳಿಂದ ಹೆಸ್ಕಾಂನಲ್ಲಿ ವಾಹನ ಚಾಲಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ಮೃತರು ಮೂವರು ಸಹೋದರರು, ಪತ್ನಿ, ಒಂದು ಹೆಣ್ಣು ಮತ್ತು ಒಂದು ಗಂಡು ಮಗುವನ್ನು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧುಬಳಗವನ್ನು ಅಗಲಿದ್ದಾರೆ. ಕಳೆದ ಅನೇಕ ವರ್ಷಗಳಿಮದ ಉರಗಪ್ರೇಮಿಯಾಗಿಯೇ ಗುರುತಿಸಿಕೊಂಡಿದ್ದ ರಾಘವೇಂದ್ರ ವಿ.ನಾಯಕ ಅವರು ಈವರೆಗೆ ಸಹಸ್ರ ಸಂಖ್ಯೆಯಲ್ಲಿ ವಿವಿಧ ಜಾತಿಯ ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಮರಳಿ ಕಾಡಿಗೆ ಬಿಟ್ಟು ಬರುವುದರ ಮೂಲಕ ಹಾವಿನ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

RELATED ARTICLES  ರಾಜಕೀಯ ಪ್ರೇರಿತವಾಗಿ ದೂರು ದಾಖಲಿಸಿ ಸೂರಜ್ ನಾಯ್ಕರನ್ನು ಬಂಧಿಸಲಾಗಿದೆ: ಅಂಕೋಲಾದಲ್ಲಿ ಈಶ್ವರಪ್ಪ ಹೇಳಿಕೆ.

ಬಹುಕಾಲ ಬಾಳಿ ಬದುಕಬೇಕಿದ್ದ ರಾಘವೇಂದ್ರ ವಿ.ನಾಯಕ ಅವರ ಅಕಾಲಿಕ ಸಾವು ನಗರಕ್ಕೆ ತುಂಬಲಾರದ ನಷ್ಟ. ಅವರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.