ಭಟ್ಕಳ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸಬ್ಬತ್ತಿ ಬಳಿ ನಡೆದಿದೆ ಎಂದು ತಿಳಿದುಬಂದಿದೆ.

ಬೈಕ್ ಸವಾರನನ್ನು ಕೇರಳದ ಕಾಸರಗೋಡಿನ ನಿವಾಸಿ ರಾಜೇಶ ನಾವೂಡ ಎಂದು ಗುರುತಿಸಲಾಗಿದೆ. ಈತ ಸಾಗರ ಕಡೆಯಿಂದ ಭಟ್ಕಳ ಕಡೆ ಬರುತ್ತಿದ್ದ ಸಮಯದಲ್ಲಿ ಭಟ್ಕಳ
ಕಡೆಯಿಂದ ಮಾರುಕೇರಿ ಕಡೆಗೆ ಹಾಲು ಸರಬರಾಜು ಮಾಡಲು ಬರುತ್ತಿದ್ದ ವಾಹನದ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

RELATED ARTICLES  ಚಾಕಲೇಟ್ ನೀಡೋದಾಗಿ ಕರೆದು ಸಲಿಂಗ ಲೈಂಗಿಕ ಕ್ರಿಯೆ ನಡೆಸಿದಾತನಿಗೆ ಶಿಕ್ಷೆ.

ಈ ಘಟನೆಯಲ್ಲಿ ಬೈಕ್ ಸವಾರನ ಕುತ್ತಿಗೆಯ
ಭಾಗದಲ್ಲಿ ಗಂಭೀರವಾದ ಗಾಯಗಳಾಗಿದೆ. ನಂತರ ಇತನನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಲಾಗಿದೆ ವರದಿಯಾಗಿದೆ.

RELATED ARTICLES  ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ?ಯಾವ ರಾಶಿಯವರಿಗೆ ಏನು ಫಲ? ಅದೃಷ್ಟ ಸಂಖ್ಯೆ ಯಾವುದು? ದಿನಾಂಕ 25/09/2018 ರ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ …