ಕುಮಟಾ : ಐದುನೂರು ವರ್ಷಗಳ ಹಿನ್ನಲೆಯಿರುವ ಅತಿ ಪುರಾತನವಾದ ಸಂತಾನ ಗಣಪತಿಯೆಂದು ಹೆಸರುವಾಸಿಯಾದ ಆರು ಅಡಿ ಎತ್ತರದ ಗಣಪತಿಯನ್ನು ಮಾದನಗೇರಿಯಲ್ಲಿ ಶ್ರೀ ಶಿವನಾಥ ಮಹಾಗಣಪತಿ ಮಂದಿರದಲ್ಲಿ ಚವತಿಯಿಂದ ಪೂಜಿಸುತ್ತ ವೈಬವದಿಂದ ಗಣೇಶೋತ್ಸವ ನಡೆಯುತ್ತಿದೆ. ದಿನ ನಿತ್ಯ ಹಲವು ಭಕ್ತಾದಿಗಳಿಂದ ವಿಶೇಷ ಪೂಜೆ ಮಹಾಪೂಜೆ ಹಿರಿಯರಾದ ಶ್ರೀಯುತ ಪ್ರವೀಣ ವಿಠೋಬ ಮಹಾಲೆ ಹಿತ್ತಲಮಕ್ಕಿ ಇವರ ನೇತೃತ್ವದಲ್ಲಿ ನಡೆಯುತ್ತಿದೆ. ಅಲ್ಲದೇ ಹಲವು ಧಾರ್ಮಿಕ ಕಾರ್ಯಕ್ರಮಗಳು ದಿನನಿತ್ಯ ನಡೆಯುತ್ತಿವೆ.

ಮೇರು ಕಲಾವಿದನಾದ ಶ್ರೀ ನಾಗೇಶ ದಾಮೋದರ ಮಹಾಲೆ ಮೈಸೂರು ಪ್ರತಿ ವರ್ಷ ನೂರಾರು ಗಣಪತಿಯ ಮೂರ್ತಿ ನಿರ್ಮಿಸುವ ಶ್ರೇಷ್ಠ ಮಣ್ಣಿನ ಕಲಾವಿದ ಶ್ರೀ ರವಿ ದಯಾನಂದ ಮಹಾಲೆ ಹಾಗು ಶ್ರೀ ನವೀನ ನರಸಿಂಹ ಮಹಾಲೆಯವರು ಒಡಗೂಡಿ ನಿರ್ಮಿಸಿದ ಅತ್ಯೂನ್ನತ ಕಲಾ ಪ್ರೌಡಿಮೆ ಎಲ್ಲರನ್ನೂ ಚಕಿತಗೊಳಿಸಿದೆ.

RELATED ARTICLES  ಕುಮಟಾದಲ್ಲಿ ಕಾಂಗ್ರೆಸ್ ಪ್ರಮುಖರಿಂದ ಬೈಕ್ ರ್ಯಾಲಿ..!

ಜೀವ ಕಳೆತುಂಬಿದ ಗಣಪತಿಯ ಮೂರ್ತಿ ಕಂಡರೆ ನಿಜವಾದ ಗಣಪತಿಯು ಸಿಂಹಾಸನದಲ್ಲಿ ವಿರಾಜಮಾನವಾದಂತೆ ಬಾಸವಾಗುವುದು ತಾ 8/9/2022ರಂದು ಸಾಮೂಹಿಕ ಗಣಹೋಮ ಸತ್ಯಗಣಪತಿ ವೃತ, ಸಂಜೆ ವಿಶ್ವ ಹಿಂದೂ ಪರಿಷತ್ ನ ಶ್ರೀ ಮಹೇಶ್ ನಾಯ್ಕ ಕುಮಟಾ ಸಂಗಡಿಗ ರಿಂದ ಭಜನಾ ಸಂಧ್ಯಾ ಹಾಗು ರಾತ್ರಿ ಮಹಾಪೂಜೆ ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮ ನಡೆಯಲಿದೆ. 9/9/2022ರಂದು ಸಂಜೆ ವೈಭವದ ಮೆರವಣಿಗೆಯೊಂದಿಗೆ ಗಣಪತಿಯ ವಿರ್ಸಜನೆ ನಡೆಯಲಿದೆ.

RELATED ARTICLES  ಉಪನ್ಯಾಸ ಹಾಗೂ ವಿದ್ಯಾ ಪ್ರೋತ್ಸಾಹ ಧನ ವಿತರಣಾ ಸಮಾರಂಭ ಸಂಪನ್ನ.

ಮಂದಿರದ ಆಡಳಿತ ಸಮಿತಿಯ ಅದ್ಯಕ್ಷರಾದ ಶ್ರೀಯುತ ರವಿ ದಯಾನಂದ ಮಹಾಲೆ ಹಾಗು ಕಾರ್ಯದರ್ಶಿಯಾದ ಶ್ರೀಯುತ ಜಗದೀಶ ಆನಂದು ಮಹಾಲೆಯವರು ಮುನ್ನಲೆಯಲ್ಲಿ ನಿಂತು ದಾರ್ಮಿಕ ಕೈಂಕರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಯುತ ರಾಜೇಶ ಆನಂದು ಮಹಾಲೆಯವರು ದಿನ ನಿತ್ಯ ಹಲವು ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.