“ಯಕ್ಷಗಾನ ಭಾಗವತಿಕೆಯ ಯುಗಪ್ರವರ್ತಕ ಗುಂಡ್ಮಿ ಕಾಳಿಂಗ ನಾವುಡರ ಸ್ಮರಣ ವೇದಿಕೆ”
ಓಡೆಯರಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರ-ನಾಗೂರಿನಲ್ಲಿ.
ಅಕ್ಟೊಬರ್ 01 ಮಧ್ಯಾಹ್ನ 3:30ಕ್ಕೆ ಉದ್ಘಾಟನಾ ಸಮಾರಂಭ.
ಶ್ರೀ ವೀರಪ್ಪ ಮೊಯ್ಲಿ ಯವರ ಘನ ಅಧ್ಯಕ್ಷತೆಯಲ್ಲಿ ಕ್ರೀಡಾ ಹಾಗು ಯುವಜನ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್ ಹಾಗು ನಮ್ಮ ಶಾಸಕರಾದ ಶ್ರೀ ಗೋಪಾಲ ಪೂಜಾರಿಯವರ ಉಪಸ್ಥಿತಿಯಲ್ಲಿ.
ನಾವುಡರ ಕುರಿತು ಶ್ರೀ ಕಿಶನ್ ಕುಮಾರ್ ಹೆಗಡೆಯವರಿಂದ ಸಂಸ್ಮರಣೆಯ ನುಡಿ, ನಾವುಡರ ಸಹವರ್ತಿಗಳಾದ ತೆಂಕುತಿಟ್ಟಿನ ಹಿರಿಯ ಭಾಗವತರಾದ ಪದ್ಯಾಣ ಹಾಗು ಪುತ್ತಿಗೆಯವರಿಂದ ನುಡಿನಮನ . ಕಾಳಿಂಗ ನಾವುಡರ ಸಹೋದರ ಶ್ರೀ ಗಣಪಯ್ಯ ನಾವುಡರಿಂದ ನೆನಪಿನ ಮಾತುಗಳು.

ನಂತರ ನಮ್ಮ ಪ್ರಾಂತ್ಯದಲ್ಲೇ ಪ್ರಪ್ರಥಮಬಾರಿಗೆ ಪದ್ಯಾಣ ಹಾಗು ಪುತ್ತಿಗೆಯವರ ದ್ವ೦ದ್ವ ಭಾಗವತಿಕೆಯಲ್ಲಿ
ತಾಳಮದ್ದಳೆ ಪ್ರಸಂಗ ಶಿವಭಕ್ತ ವೀರಮಣಿ, ಚಂಡೆ ಮದ್ದಳೆಯಲ್ಲಿ ಚೈತನ್ಯ ಪದ್ಯಾಣ ಹಾಗು ವಿನಯ್ ಆಚಾರ್ ಕಡಬ ಇವರು ಸಹಕರಿಸಲಿದ್ದಾರೆ.
ಅಂದು ಅರ್ಥದಾರಿಗಳಾಗಿ ಶ್ರೀ ಅಶೋಕ ಭಟ್ ಉಜಿರೆ, ಶ್ರೀ ಶಂಭು ಶರ್ಮ ವಿಟ್ಲ, ಶ್ರೀ ವಾಸುದೇವ ಸಾಮಗ ಹಾಗು ಶ್ರೀ ಪ್ರಸಾದ್ ಭಟ್ಕಳ ಭಾಗವಹಿಸಲಿದ್ದಾರೆ

ಅಕ್ಟೊಬರ್ 02 ಸೋಮವಾರದಂದು ಸಂಜೆ 5:00 ರಿಂದ ತಾಳಮದ್ದಳೆ ಸೀತಾಪಹಾರ
ಹಿಮ್ಮೇಳ : ಶ್ರೀ ರಾಘವೇಂದ್ರ ಮಯ್ಯ ,ಶ್ರೀ ಗಣೇಶಮೂರ್ತಿ ಹುಲಗಾರು, ಶ್ರೀ ಶಿವಾನಂದ ಕೋಟ
ಅರ್ಥದಾರಿಗಳು :ಡಾ| ಎಂ. ಪ್ರಭಾಕರ ಜೋಷಿ, ಶ್ರೀ ವೆಂಕಟರಾಮ್ ಭಟ್, ಶ್ರೀ ರವಿರಾಜ ಪೆನೆಲಾಯ, ಶ್ರೀ ಸುಜಯಿಂದ್ರ ಹಂದೆ, ಶ್ರೀ ಪ್ರಸಾದ್ ಭಟ್ಕಳ

RELATED ARTICLES  ಪವರ್ ಗ್ರೀಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಪಿಜಿಸಿಐಎಲ್) ನಲ್ಲಿನ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.

ಅಕ್ಟೊಬರ್ 03 ಮಂಗಳವಾರ ಸಂಜೆ 5:00 ರಿಂದ ತಾಳಮದ್ದಳೆ ಗುರುದಕ್ಷಿಣೆ
ಹಿಮ್ಮೇಳ: ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು, ಶ್ರೀ ಗಜಾನನ ಭಂಡಾರಿ ಬೋಳ್ಗೆರೆ, ಶ್ರೀ ರಾಮಕೃಷ್ಣ ಮಂದಾರ್ತಿ
ಅರ್ಥದಾರಿಗಳು : ವಿದ್ವಾನ ಶ್ರೀ ಹಿರಣ್ಯ ವೆಂಕಟೇಶ ಭಟ್, ಶ್ರೀ ರಾಧಾಕೃಷ್ಣ ಕಲ್ಚಾರ್,ಶ್ರೀ ಜಬ್ಬಾರ್ ಸಮೋ,ಶ್ರೀ ವಾದಿರಾಜ ಕಲ್ಲೂರಾಯ

ಅಕ್ಟೊಬರ್ 04 ಬುಧವಾರ ಸಂಜೆ 5:00 ರಿಂದ ತಾಳಮದ್ದಳೆ
ಸುದರ್ಶನ ವಿಜಯ
ಹಿಮ್ಮೇಳ : ಶ್ರೀ ಸರ್ವೇಶ್ವರ ಮುರೂರು, ಶ್ರೀ ಶಶಿ ಆಚಾರ್, ಶ್ರೀ ಕಾರ್ತಿಕೇಯ
ಅರ್ಥದಾರಿಗಳು : ಡಾ| ಎಂ. ಪ್ರಭಾಕರ ಜೋಷಿ, ವಿದ್ವಾನ ಶ್ರೀ ಹಿರಣ್ಯ ವೆಂಕಟೇಶ ಭಟ್, ಶ್ರೀ ಜಬ್ಬಾರ್ ಸಮೋ, ಹರೀಶ ಬಳಂತಿಮೊಗರು, ಶ್ರೀ ವೈಕುಂಠ ಹೇರಳೆ

ಅಕ್ಟೊಬರ್ 05 ಗುರುವಾರ ಸಂಜೆ 5:00ರಿಂದ ತಾಳಮದ್ದಳೆ
ಶ್ರೀಕೃಷ್ಣ ಪರಂಧಾಮ
ಹಿಮ್ಮೇಳ : ಶ್ರೀ ಸುಬ್ರಹ್ಮಣ್ಯ ಧಾರೇಶ್ವರ, ಶ್ರೀ ಚಂದ್ರಕಾಂತ ಮೂಡುಬೆಳ್ಳೆ, ಶ್ರೀ ಶಂಕರ ಭಾಗವತ,ಶ್ರೀ ಗಣೇಶ ಗಾಂವ್ಕರ
ಅರ್ಥದಾರಿಗಳು: ವಿದ್ವಾನ್ ಶ್ರೀ ಉಮಾಕಾಂತ ಭಟ್, ಶ್ರೀ ಅಶೋಕ ಭಟ್ ಉಜಿರೆ, ಶ್ರೀ ರಾಧಾಕೃಷ್ಣ ಕಲ್ಚಾರ್, ಶ್ರೀ ಜಬ್ಬಾರ್ ಸಮೋ, ಶ್ರೀ ಹರೀಶ ಬಳಂತಿಮೊಗರು,ಶ್ರೀ ವಾದಿರಾಜ ಕಲ್ಲೂರಾಯ, ಶ್ರೀ ಪ್ರಸಾದ್ ಭಟ್ಕಳ

ಅಕ್ಟೊಬರ್ 06 ಶುಕ್ರವಾರ ಸಂಜೆ 5:00 ರಿಂದ ತಾಳಮದ್ದಳೆ
ರಾಜಾ ಸತ್ಯ ಹರಿಶ್ಚಂದ್ರ
ಹಿಮ್ಮೇಳ : ಶ್ರೀ ಸುಬ್ರಹ್ಮಣ್ಯ ಧಾರೇಶ್ವರ, ವಿದ್ವಾನ್ ಗಣಪತಿ ಭಟ್, ಶ್ರೀ ಶಂಕರ ಭಾಗವತ,ಶ್ರೀ ಗಣೇಶ ಗಾಂವ್ಕರ
ಅರ್ಥದಾರಿಗಳು : ಶ್ರೀ ಅಶೋಕ ಭಟ್ ಉಜಿರೆ, ವಿದ್ವಾನ್ ಶ್ರೀ ಉಮಾಕಾಂತ ಭಟ್, ಶ್ರೀ ಹರೀಶ ಬಳಂತಿಮೊಗರು, ಶ್ರೀ ರವಿರಾಜ ಪೆನಲಾಯ, ಶ್ರೀ ವೈಕುಂಠ ಹೇರಳೆ, ಶ್ರೀ ಪ್ರಸಾದ್ ಭಟ್ಕಳ

RELATED ARTICLES  ಫೆ.25ರಂದು ಸರಕುಳಿ ಶ್ರೀಜಗದಾಂಬಾ ಪ್ರೌಢ ಶಾಲಾ ಆವಾರದಲ್ಲಿ ನಡೆಯಲಿದೆ ವಾಲಿಬಾಲ್ ಪಂದ್ಯಾಟ

ಅಕ್ಟೊಬರ್ 07ರಂದು ಸಂಜೆ 4:00 ರಿಂದ
ತೆಕ್ಕಟ್ಟೆ ಆನಂದ ಮಾಸ್ತರರ ಸ್ಮರಣಾರ್ಥ ನೀಡುವ ಕಲಾತಪಸ್ವಿ ಪ್ರಶಸ್ತಿ
ಪ್ರದಾನ ಹಾಗು ಸಮಾರೋಪ

2017 ರ ಕಲಾತಪಸ್ವಿ ಪ್ರಶಸ್ತಿ : ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ

ಅಧ್ಯಕ್ಷತೆ ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀ ಶ್ರೀನಿವಾಸ ಪೂಜಾರಿ,ಅಭ್ಯಾಗತರಾಗಿ ಮಾಜಿ ಸಂಸದರಾದ ಶ್ರೀ ಜಯಪ್ರಕಾಶ ಹೆಗಡೆ, ಶ್ರೀ ಕಲ್ಕೂರು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ ಕುಮಾರ ಕಲ್ಕೂರ, ಉದ್ಯಮಿಗಳಾದ ಮಾರಣಕಟ್ಟೆ ಶ್ರೀ ಕೃಷ್ಣ ಮೂರ್ತಿ ಮಂಜ ಹಾಗು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಪ್ರಕಾಶ್ಚ್೦ದ್ರ ಶೆಟ್ಟಿ ಹಾಗು ತೆಕ್ಕಟ್ಟೆ ಕುಟುಂಬದವರು ನಮ್ಮೊಂದಿಗಿರಲಿದ್ದಾರೆ.

ನಂತರ ಸಂಜೆ 5:00 ರಿಂದ ತಾಳಮದ್ದಳೆ
ಶ್ರೀಕೃಷ್ಣ ಸಂಧಾನ
ಹಿಮ್ಮೇಳ : ಶ್ರೀ ಸುಬ್ರಹ್ಮಣ್ಯ ಧಾರೇಶ್ವರ, ಶ್ರೀ ಚಂದ್ರಕಾಂತ ಮೂಡುಬೆಳ್ಳೆ, ಏನ್.ಜಿ ಹೆಗಡೆ ಯಲ್ಲಾಪುರ, ಶ್ರೀ ಗಣೇಶ ಗಾಂವ್ಕರ
ಅರ್ಥದಾರಿಗಳು : ಶ್ರೀ ವಾಸುದೇವ ರಂಗ ಭಟ್, ಶ್ರೀ ಗಣಪತಿ ಭಟ್ ಸಂಕದಗುಂಡಿ, ಶ್ರೀ ಪ್ರಸಾದ ಭಟ್ಕಳ

ಈ ಎಲ್ಲಾ ಕಾರ್ಯಕ್ರಮಗಳಿಗೆ ಧಾರೇಶ್ವರ ಯಕ್ಷಬಳಗದ ಪರವಾಗಿ, ಊರ ನಾಗರಿಕರ ಪರವಾಗಿ ಆತ್ಮೀಯ ಸ್ವಾಗತ 🙂