ಕುಮಟಾ: ಕಾರು ಹಾಗೂ ಪ್ಯಾಸೆಂಜರ್ ಆಟೋ ನಡುವೆ ನಡೆದ ಅಪಘಾತದಲ್ಲಿ ಆಟೋ ಚಾಲಕ ಗಾಯಗೊಂಡ ಘಟನೆ ಕುಮಟಾ ತಾಲೂಕಿನ ಧಾರೇಶ್ವರದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ.

ತಾಲೂಕಿನ ತಲಗೋಡ ಊರಕೇರಿಯ ಆಟೋ
ಚಾಲಕ ಶ್ರೀಪಾದ ಪಟಗಾರ (40) ಗಾಯಗೊಂಡಿದ್ದಾನೆ ಎನ್ನಲಾಗಿದೆ.

RELATED ARTICLES  ಟಿಪ್ಪರ್ ಹಾಗೂ ಬೈಕ್ ಡಿಕ್ಕಿ : ಗಾಯಗೊಂಡಿದ್ದ ವ್ಯಕ್ತಿ ಸಾವು : ಕುಮಟಾದಲ್ಲಿ ಘಟನೆ

ಈತ ತಾಲೂಕಿನ ಧಾರೇಶ್ವರದ ದೇವಸ್ಥಾನದ ಎದುರು ಯಾವುದೇ ಮುನ್ಸೂಚನೆ ಇಲ್ಲದೇ ಏಕಾಏಕಿ ಆಟೋವನ್ನು ಬಲಬದಿಗೆ ಚಲಾಯಿಸಿದ್ದರಿಂದ ಕುಮಟಾದಿಂದ
ಹೊನ್ನಾವರ ಕಡೆಗೆ ತೆರಳುತ್ತಿದ್ದ ಕಾರು ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.

RELATED ARTICLES  ಜನಜಾಗೃತಿ ಸಮಿತಿ ವತಿಯಿಂದ ಮನವಿ

ಈ ಅಪಘಾತದ ರಭಸಕ್ಕೆ ಆಟೋ ಹಾಗೂ
ಕಾರು ಜಖಂಗೊಂಡಿದ್ದು, ಈ ಕುರಿತಾಗಿ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.