ಭಟ್ಕಳ: ಭಟ್ಕಳದ ಕಡೆಯಿಂದ ಮುರುಡೇಶ್ವರದತ್ತ ಪ್ರಯಾಣ ಬೆಳೆಸಿದ್ದ ಮಿನಿ ಲಾರಿಯೊಂದು ಮೋಟಾರ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ತಾಲೂಕಿನ ಶಿರಾಲಿ ಸರ್ಕಲ್ ಸಮೀಪ ನಡೆದಿದಿರುವ ಬಗ್ಗೆ ವರದಿಯಾಗಿದೆ.

RELATED ARTICLES  ಟಿ.ಎಸ್.ಎಸ್. ಮಿನಿ ಸುಪರ್ ಮಾರ್ಕೆಟ್‍ನ ಘಟಕ ಉದ್ಘಾಟನೆ

ಗಾಯಗೊಂಡವರನ್ನು ಪರಮೇಶ್ವರ ದೇವಿದಾಸ ದೇವಾಡಿಗ (32) ಎಂದು ಗುರುತಿಸಲಾಗಿದ್ದು, ಇವರ ತಲೆ, ಬಲಗೈ ಹಾಗೂ ಕಾಲುಗಳಿಗೆ ಏಟು ತಗುಲಿದೆ. ಇವರು ಮುರುಡೇಶ್ವರದಿಂದ ಶಿರಾಲಿ ತಟ್ಟಿಹಕ್ಕಲ್‌ಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

RELATED ARTICLES  ಕೋವಿಡ್-19 ಜಾಗೃತಿಯ ಎಲ್. ಇ. ಡಿ ವಾಹನಕ್ಕೆ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಚಾಲನೆ

ಈ ಸಂಬಂಧ ಗಾಯಾಳು ಪರಮೇಶ್ವರ ಸಹೋದರ ರವೀಂದ್ರ ದೇವಾಡಿಗ ಪೊಲೀಸರಿಗೆ ದೂರು ನೀಡಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.