ಕಾರವಾರ: ಉತ್ತರಕನ್ನಡದ ಹಲವು ತಾಲೂಕುಗಳಲ್ಲಿ ನಿತ್ಯವೂ ಅಪಘಾತದ ಸುದ್ದಿಗಳು ಬರುತ್ತಿದ್ದು, ಇಂದೂ ಸಹ ತಾಲೂಕಿನ ಮಲ್ಲಾಪುರ ಗ್ರಾಪಂ ವ್ಯಾಪ್ತಿಯ ಹಿಂದೂವಾಡಾದ ದುರ್ಗಾದೇವಿ ದೇವಸ್ಥಾನದ ಬಳಿ ಅಪಘಾತವೊಂದು ಸಂಭವಿಸಿ, ಬೈಕ್ ಹಾಗೂ ಕಾರಿನ ನಡುವೆ ನಡರದ ಈ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.

RELATED ARTICLES  ಕೋಳಿ ಫಾರಂನಿಂದ ಹೆಚ್ಚಿದೆ ನೊಣಗಳು: ಕಳವಳಗೊಂಡಿದ್ದಾರೆ ಶಿರಸಿ ಹಲವು ಗ್ರಾಮದ ಜನರು.

ತಾಲೂಕಿನ ದೇವಳಮಕ್ಕಿ ನಿವಾಸಿ ಪ್ರೇಮಾನಂದ ಜೈವಂತ ನಾಯ್ಕ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಅಪಘಾತದಿಂದಾಗಿ ಈತನ ಮುಖದ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿದೆ, ಕೈ ಕಾಲುಗಳಿಗೆ ಪೆಟ್ಟಾಗಿದೆ ಎಂದು ಸ್ಥಳೀಯ ವರದಿ ಸಿಕ್ಕಿದೆ.

RELATED ARTICLES  ಹೊನ್ನಾವರ : ಮಂಕಿಮಡಿ ಶಾಲೆಯ ಮುಖ್ಯಶಿಕ್ಷಕ ಡಿ.ಎಸ್ ಹೊರ್ಟಾ ಇನ್ನಿಲ್ಲ.

ವಿಷಯ ತಿಳಿದ ತಕ್ಷಣ ಸ್ಥಳೀಯರ ನೆರವಿನೊಂದಿಗೆ ಕೈಗಾ ಎನ್.ಪಿ.ಸಿ.ಐ.ಎಲ್. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಆರೈಕೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಕಿಮ್ಸ್ ಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಮಲ್ಲಾಪುರ ಠಾಣೆ ಪೊಲೀಸರು ತೆರಳಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.