ಮುಂಡಗೋಡ: ಚಲಿಸುತ್ತಿದ್ದ ಬೈಕ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ಪಟ್ಟಣದ ಬಂಕಾಪುರ ರಸ್ತೆಯ ದೇಸಾಯಿ ಮೆಡಿಕಲ್ ಬಳಿ ಮಂಗಳವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ.

ಶಿವಾಜಿ ಸರ್ಕಲ್ ನಲ್ಲಿ ಬಂಕಾಪುರ ರಸ್ತೆಯಲ್ಲಿ ಚಾಲಕನೋರ್ವ ಹೊರಟ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಬೈಕ್ ಟ್ಯಾಂಕ್ ನ ಭಾಗದಲ್ಲಿ ಇದ್ದಕ್ಕಿದ್ದಂತೆ ಹೊಗೆ ಬರಲಾರಂಭಿಸಿದೆ. ತಕ್ಷಣ ಚಾಲಕ ಭಯದಿಂದ ಬೈಕ್ ಬಿಟ್ಟು ಪಕ್ಕಕ್ಕೆ ಸರಿದಿದ್ದು, ಅಷ್ಟರಲ್ಲೇ ಟ್ಯಾಂಕ್ ಮೇಲಿನಿಂದ ಬೆಂಕಿ ಆವರಿಸಿದೆ ಎನ್ನಲಾಗಿದೆ.

RELATED ARTICLES  ಹಿರೇಗುತ್ತಿಯಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ಮ್ಯಾನೇಜರ್ ಲಕ್ಷ್ಮಣ ಗೌಡರಿಗೆ ಬಿಳ್ಕೊಡುವಿಕೆ ಸಮಾರಂಭ

ಈ ವೇಳೆ ಚಾಲಕ ಹಾಗೂ ಸ್ಥಳೀಯರು ನೀರು ಹಾಕಿ ಬೆಂಕಿ ಪ್ರಯತ್ನಿಸಿದರೂ ಬೆಂಕಿ ಆರಿರಲಿಲ್ಲ. ಬಳಿಕ ಗೋಣಿಚೀಲಗಳಿಂದ ಬೈಕ್ ಅನ್ನು ಮುಚ್ಚಿ ಬೆಂಕಿ ನಂದಿಸಲಾಗಿದೆ.

RELATED ARTICLES  ಶಿರಸಿ ಜಿಲ್ಲಾ ಸಮೀತಿ ಹೋರಾಟಕ್ಕೆ ಬೆಂಬಲ ಕೋರಿ ಮಾಜಿ ಪ್ರಧಾನಿಗೆ ಮನವಿ