ಯಲ್ಲಾಪುರ: ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟ ಅನಾಥ ವ್ಯಕ್ತಿಯೊಬ್ಬನ ಶವವನ್ನು ಪಟ್ಟಣ ಪಂಚಾಯಿತಿ ರವೀಂದ್ರನಗರ ವಾರ್ಡ್ ಸದಸ್ಯ ಸೋಮೇಶ್ವರ ನಾಯ್ಕ ಹಾಗೂ ಇನ್ನಿತರರು ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸುಮಾರು 65 ವರ್ಷದ ಗುರು ರೇವಣಕರ್ ಎನ್ನುವ ಅನಾಥ ವೃದ್ಧ ಕಳೆದ 20 ವರ್ಷದಿಂದ ಯಲ್ಲಾಪುರದಲ್ಲಿ ವಾಸಿಸುತ್ತಿದ್ದ. ಈತನಿಗೆ ಸಂಬಂಧಿಕರು ಯಾರು ಇಲ್ಲದಿರುವ ಕಾರಣಕ್ಕೆ ಅಲ್ಲಿ ಇಲ್ಲಿ ಸುತ್ತುತ್ತಿದ್ದ. ನಾಲ್ಕೈದು ದಿನಗಳ ಹಿಂದೆ ಜೋಡುಕೆರೆ ಮಾರುತಿ ದೇವಸ್ಥಾನದ ಬಳಿ ತೀವ್ರ ಅನಾರೋಗ್ಯದಿಂದಾಗಿ ಬಿದ್ದುಕೊಂಡಿದ್ದ ಗುರು ರೇವಣಕರನನ್ನು ಪೊಲಿಸರು ಹಾಗೂ ಸಾರ್ವಜನಿಕರು ತಾಲೂಕ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅಲ್ಲಿ ಚಿಕಿತ್ಸೆಗೆ ಸ್ಪಂದಿಸಿದೆ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.

RELATED ARTICLES  ಕುಮಟಾದ ಹೆಗಡೆಯಲ್ಲಿ ಚತುರ್ವೇದ ಪಾರಾಯಣ ಮಹಾಸತ್ರಕ್ಕೆ ಚಾಲನೆ

ವಿಷಯ ತಿಳಿದ ತಕ್ಷಣವೇ ಸೋಮೇಶ್ವರ ನಾಯ್ಕ ಮೃತನ ಅಂತ್ಯ ಸಂಸ್ಕಾರ ಮಾಡಲು ನಿರ್ಧರಿಸಿ, ರವೀಂದ್ರನಗರ ನಿವಾಸಿಗಳಾದ ಜಗದೀಶ ನಾಯ್ಕ, ಸಂತೋಷ ಬೋವಿ, ಸುರೇಶ ಶೆಟ್ಟಿ, ಬಾಲ ಪಿಳ್ಳೆ, ಸೋಮು ನೆಲೋಡಿ ಹಾಗೂ ಬಾಬಾ ಅವರ ಸಹಕಾರ ಪಡೆದು ಮೃತನ ಅಂತ್ಯಸಂಸ್ಕಾರವನ್ನು ಶಾಸ್ತ್ರೋತ್ರವಾಗಿ ನೆರವೇರಿಸಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಸೀಬರ್ಡ್ ನಿರಾಶ್ರಿತರಿಗೆ ಪರಿಹಾರ ವಿತರಣೆ ನಾಳೆ : ಮಾಹಿತಿ ನೀಡಿದ ನ್ಯಾಯವಾದಿ ನಾಗರಾಜ ನಾಯಕ