ಭಟ್ಕಳ: ಕಳೆದ 2021 ರ ಫೆಬ್ರುವರಿಯಲ್ಲಿ ತಾಲೂಕಿನ ಶಿರಾಲಿಯಲ್ಲಿ ಬಾಲಕಿಯೋರ್ವಳ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ (FTSC1) ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.

ಬಾಲಕಿಯೊಂದಿಗೆ ಸಂಭೋಗ ನಡೆಸಿ ಆಕೆ ಗರ್ಭಧರಿಸಲು ಕಾರಣನಾದ ಶಿರಾಲಿ ಗುಡಿಹಿತ್ತಲ ನಿವಾಸಿ ಶಿವರಾಜ್ ನಾಯ್ಕ (23) ನಿಗೆ 20 ವರ್ಷ ಜೈಲು ಹಾಗೂ 95 ಸಾವಿರ ರೂ. ದಂಡ ಮತ್ತು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆಕೆಯ ಸಂಬಂಧಿ, ಶಿರಸಿ ಹುಲೇಕಲ್ ನಿವಾಸಿ ರವಿಶಂಕರ ಪಟಗಾರನಿಗೆ 3 ವರ್ಷ ಜೈಲು ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

RELATED ARTICLES  ಡಯಾಲಿಸಿಸ್ ಘಟಕಕ್ಕೆ 50 ಸಾವಿರ ನೀಡಿದ ಜಿ.ಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕಾ