ಸಿದ್ದಾಪುರ: ಸಿದ್ದಾಪುರ-ಸಾಗರ ರಸ್ತೆಯ ಕಾವಂಚೂರಿನಲ್ಲಿ ಕಾರುಗಳ ನಡುವೆ ಮುಖಮುಖಿ ಡಿಕ್ಕಿ ಸಂಭವಿಸಿ ಆರು ಜನ ಗಾಯಗೊಂಡ ಘಟನೆ ಇಂದು ನಡೆದಿದೆ‌ ಎಂದು ವರದಿಯಾಗಿದೆ.

ಸಿದ್ದಾಪುರ ಕಡೆಯಿಂದ ಸಾಗರ ಕಡೆಗೆ ಹೋಗುತ್ತಿದ್ದ ಕಾರು ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು,108 ವಾಹನದ ಮೂಲಕ ಗಾಯಾಳುಗಳನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಕೆಲವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲ‌ಕಾಲ‌ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.

RELATED ARTICLES  ನಿವೃತ್ತ ಪ್ರಾಚಾರ್ಯ ಎಸ್.ಎಸ್.ವೇರ್ಣೇಕರ ನಿಧನ