ಸಿದ್ದಾಪುರ: ರಂಗಭೂಮಿಯ ಸಂಗೀತ ನಿರ್ದೇಶಕ ಹಾಗೂ ಖ್ಯಾತ ಹಿನ್ನೆಲೆ ಗಾಯಕ ಕೊಂಡ್ಲಿಯ ರಾಮಕೃಷ್ಣ ಸಿ.ಕೊಂಡ್ಲಿ ಹಾಳದಕಟ್ಟಾ ಗದ್ದೆಯಲ್ಲಿ ತೆರಳಿದ್ದಾಗ ದಿಢೀರ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಮನೆಯಿಂದ ಸ್ವಲ್ಪ ದೂರ ಹಾಳದಕಟ್ಟಾ ರೇಣುಕಾ ಟೀಲ್ಸ್ ಹಿಂಬದಿಯಲ್ಲಿರುವ ತಮ್ಮ ಗದ್ದೆಗೆ ನೀರುಕಟ್ಟಲು ತೆರಳಿದ್ದರು. ಈ ವೇಳೆ ಗದ್ದೆಯಲ್ಲಿಯ ದನಗಳನ್ನು ಓಡಿಸಲು ಮುಂದಾದಾಗ ಗದ್ದೆಯ ಅಂಚಿನಲ್ಲಿ ಬಿದ್ದವರು ಮೃತಪಟ್ಟಿದ್ದಾರೆ. ಗದ್ದೆಯಲ್ಲಿ ಬಿದ್ದವರು ಆಘಾತಗೊಂಡು ಅಥವಾ ಬಿದ್ದು ಮುಖಕ್ಕೆ ಬಿದ್ದ ಪೆಟ್ಟಿನಿಂದಲೋ ಮೃತಪಟ್ಟಿರಬಹುದು ಕಂಡುಬಂದಿದೆ ಎಂದು ಮೃತನ ಮಗ ಗಣೇಶ ಮಡಿವಾಳ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಭಟ್ಕಳದಲ್ಲಿ ಹಾಡುಹಗಲೇ ವಾಹನ ತಡೆದು ಇಬ್ಬರ ಮೇಲೆ ಹಲ್ಲೆ: ಹಣ ಹಾಗೂ ಮೊಬೈಲ್‍ನ್ನು ದೋಚಿಕೊಂಡು ಪರಾರಿ

ಮೃತ ರಾಮಕೃಷ್ಣ ಕೊಂಡ್ಲಿ ವೃತ್ತಿಯಲ್ಲಿ ಕೃಷಿಕರಾಗಿದ್ದರೂ, ತಾಲೂಕಿನಲ್ಲಿ ಸುಧೀರ್ಘ ಕಾಲ ಸಾಮಾಜಿಕ ನಾಟಕದಲ್ಲಿ ಸಂಗೀತ ನಿರ್ದೇಶಕ ಹಾಗೂ ಹಿನ್ನೆಲೆ ಗಾಯಕರಾಗಿ ಹೆಸರು ಮಾಡಿದ್ದರು. ನೂರಾರು ನಾಟಕಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಕೊಂಡ್ಲಿ ರಾಮಕೃಷ್ಣಣ್ಣ ಎಂದೇ ಖ್ಯಾತರಾಗಿದ್ದ ರಾಮಕೃಷ್ಣ ಕೊಂಡ್ಲಿ ನಿಧನಕ್ಕೆ ರಂಗಭೂಮಿ ಕಲಾವಿದರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

RELATED ARTICLES  ಹೊನ್ನಾವರದಲ್ಲಿ ರಾಷ್ಟ್ರೀಯ ಕಾನೂನು ದಿನಾಚರಣೆ: ಕಾನೂನಿನ ಅರಿವು ಬೆಳೆಸಿಕೊಳ್ಳಲು ಕರೆ.