ಭಟ್ಕಳ-ಭಟ್ಕಳ ತಾಲೂಕಿನ ಮೀನುಗಾರಿಕಾ ಇಲಾಖೆಯು ಕಚೇರಿಯು ಅಕ್ಷರಶ ದಿಕ್ಕು ದೇಸೆ ಇಲ್ಲದಂತಾಗಿದ್ದು ಬುದುವಾರ ಮೀನುಗಾರಿಕಾ ಕಛೇರಿ ಯಾವುದೆ ಸರಕಾರಿ ರಜೆ ಇಲ್ಲದೆ ಇದ್ದರು ಅಧಿಕಾರಿಗಳು ಕಛೇರಿಗೆ ಬೀಗ ಹಾಕಿದ್ದು ಬಡ ಮೀನುಗಾರರು ಪರದಾಡುವಂತಾಗಿದೆ . ಈ ಬಗ್ಗೆ ಒಂದು ವಿಷೇಶ ವರದಿ ಇಲ್ಲಿದೆ ನೋಡಿ.

ಹೌದು ಭಟ್ಕಳ ಮಿನುಗಾರಿಕೆ ಇಲಾಖೆಯ ವಿರುದ್ದ ಈಗಾಗಲೆ ಮಾಹಿತಿ ಹಕ್ಕು ಸಂಘಟನೆ ಹಾಗು ಇತರ ಸಾಮಾಜಿಕ ಕಾರ್ಯಕರ್ತರು ದೋಣಿ ವ್ಯವಾಹಾರದಲ್ಲಿ ಕೊಟ್ಯಾಂತರ ಅವ್ಯವಹಾರ ಆಗಿದೆ ಎಂದು ಆರೋಪ ಮಾಡಿದ್ದು ಇದು ಈಗಾಗಲೆ ವಿಚಾರಣಾ ಹಂತದಲ್ಲಿದೆ , ಇದರ ಮದ್ಯ ಬುದುವಾರವಾದ ಈ ನಾಚಿಕೆಗೆಟ್ಟ ಮಿನುಗಾರಿಕಾ ಇಲಾಖೆಯ ಅಧಿಕಾರಿ ಬೆಳಿಗ್ಗೆ ಇಂದಲೆ ಕಛೇರಿಗೆ ಬೀಗಹಾಕಿ ಎಲ್ಲಿಗೋ ಹೊರಟಿದ್ದಾರೆ. ಮಿನುಗಾರರು ಹಾಗು ಫಲಾನುಭವಿಗಳು ಬೆಳಿಗ್ಗೆಯಿಂದ ಮಿನುಗಾರಿಕ ಇಲಾಖೆ ಕಛೇರಿಗೆ ಹಾಕಿರುವ ಬೀಗವನ್ನು ನೋಡಿ ಹಿಡಿ ಶಾಪವನ್ನು ಹಾಕುತ್ತ ಬಂದ ದಾರಿಗೆ ಸುಂಕ ಇಲ್ಲಾ ಎಂಬಂತೆ ವಾಪಾಸ್ ತೇರಳುತ್ತಿದ್ದರು. ಈ ಭಟ್ಕಳ ಮೀನುಗಾರಿಕಾ ಇಲಾಖೆ ಎಷ್ಟು ಬೆಜವಬ್ದಾರಿಯನ್ನು ತೊರಿಸುತ್ತದೆ ಎನ್ನುವುದಕ್ಕೆ ಉದಾಹರಣೆ ಎಂದರೆ ಎಲ್ಲಾ ಸರಕಾರಿ ಕಛೇರಿಯ ಮುಂದೆ ಪ್ರತಿ ದಿನ ಬೆಳಿಗ್ಗೆ ರಾಷ್ಟ್ರದ್ವಜವನ್ನು ಎರಿಸಿ ಗೌರವ ಸಮರ್ಪಿಸಲಾಗುತ್ತದೆ ಆದರೆ ಭಟ್ಕಳ ಮಿನುಗಾರಿಕಾ ಕಛೇರಿಯು ಇದಕ್ಕೆ ವ್ಯತಿರಿಕ್ತ ಇಲ್ಲಿ ಈ ಇಲಾಖೆಯವನ್ನು ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ ಇವರು ತಮ್ಮ ಕಛೇರಿಯ ಮುಂದೆ ರಾಷ್ಟ್ರ ಧ್ವಜವನ್ನು ಹಾರಿಸುವುದೆ ಇಲ್ಲಾ ಇವರು ತಮ್ಮ ಕಛೇರಿಯ ದ್ವಜ ಕಂಬಕ್ಕೆ ಹಗ್ಗವನ್ನಷ್ಟೆ ಕಟ್ಟಿದ್ದಾರೆ ಇದೆಂತಾ ಮಾನಗೆಟ್ಟ ಇಲಾಖೆ ಎಂದು ಸಾರ್ವಕನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

RELATED ARTICLES  ಭಾರತೀಯ ಸೈನ್ಯದ 'ಅಗ್ನಿವೀರ್' ಮೂಲಕ ದೇಶ ಸೇವೆಗೆ ಹೊರಟ ಹೊನ್ನಾವರದ ಹುಡುಗ.

ಈ ಮೀನುಗಾರಿಕಾ ಇಲಾಖೆ ಮಿನುಗಾರರನ್ನು ಉದ್ದಾರ ಮಾಡುದು ನಂತರದ ಸವಾಲು ಇವರಿಗೆ ತಮ್ಮ ಕಛೇರಿಯನ್ನು ಕಛೇರಿಯ ಆವರಣವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಕನಿಷ್ಟ ಜವಬ್ದಾರಿಯನ್ನು ತೋರಿಸುವುದಿಲ್ಲಾ ಇಂತವರಿಂದ ತಾಲೂಕಿನಲ್ಲಿ ಮಿನುಗಾರರ ಅಭಿವೃದ್ದಿ ಎಷ್ಟರ ಮಟ್ಟಿಗೆ ನಿರೀಕ್ಷಿಸ ಬಹುದಾಗಿದೆ ಎಂಬುದು ಸಾರ್ವಜನಿಕ ವಲದ ಪ್ರಶ್ನೇಯಾಗಿದೆ.

ಈ ಕಛೇರಿಯನ್ನು ನೋಡಿದರೆ ಇವರು ಇಟ್ಟಿರುವ ಸ್ವಚ್ಚತೆಗೆ ಹೊಟ್ಟೆ ತೋಳಸಿದಂತಾಗುತ್ತದೆ .ಅಲ್ಲಲ್ಲಿ ಬಿದ್ದಿರು ಪ್ಲಾಸ್ಟಿಕ್ ಮರದ ಎಲೆಗಳು ಬಣ್ಣ ಕಿತ್ತುಹೊದ ಕಛೇರಿಗೋಡೆ , ಒಂದೆ ಎರಡೆ ಈ ಕಛೇರಿಯನ್ನು ನೊಡಿದರೆ ಇಲ್ಲಿ ಸರಕಾರಿ ವ್ಯವಹಾರಗಳು ನಡೆಸದೆ ವರ್ಷಕಳೆದು ಹೋಗಿದೆಯೆನೋ ಎಂಬ ಅನಮಾನಗಳು ಮೂಡುತ್ತದೆ ಇವರ ಕಛೇರಿ ಯಾವಗ ತೇರೆಯುತ್ತದೆ ಯಾವಾಗ ಮುಚ್ಚುತ್ತದೆ ಎಂಬ ಯಾವ ಮಾಹಿತಿ ಯಾರಿಗೂ ಇಲ್ಲಾ, ಉದಾಹರಣೆ ಬುದುವಾರ ಈ ಮೀನುಗಾರಿಕಾ ಕಛೇರಿ ಘಂಟೆ ಹತ್ತು ಆದರೂ , ಇಲ್ಲಾ ಹನ್ನೊಂದಾರು ಇಲ್ಲಾ ಒಂದಾದರು ಇಲ್ಲಾ, ಸರಕಾರಿ ರಜೆ ಇಲ್ಲದೆ ಇವರು ಯಾವ ಆದಾರದ ಮೇಲೆ ಕಛೇರಿ ಬಾಗಿಲನ್ನು ಹಾಕುತ್ತಾರೆ ,ಇವರು ಮನಸ್ಸಿಗೆ ಬಂದಂತೆ ಕಛೇರಿಗೆ ಬರುವುದು ಕಛೇರಿ ಬಾಗಿಲನ್ನು ತೆರೆಯುದನ್ನು ಮಾಡಲು ಇದೆನು ಇವರ ಮಾವನ ಮನೆಯೆ ಇವರಿಗೆ ಹೇಳುವವರು ಕೇಳುವವರು ಯಾರು ಇಲ್ಲವೆ?

RELATED ARTICLES  ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ?ಯಾವ ರಾಶಿಯವರಿಗೆ ಏನು ಫಲ? ಅದೃಷ್ಟ ಸಂಖ್ಯೆ ಯಾವುದು?

ಇದನ್ನೂ ಓದಿ – ಗದ್ದೆಯಲ್ಲಿ ಕುಸಿದುಬಿದ್ದ ಖ್ಯಾತ ಹಿನ್ನೆಲೆ ಗಾಯಕ ಹಾಗೂ ಸಂಗೀತ ನಿರ್ದೇಶನ

ಮೊದಲೆ ಇವರು ಅನೇಕ ಭ್ರಷ್ಟಾಚಾರದ ಆರೋಪಗಳಿಗೆ ಅದರ ಮದ್ಯ ಈ ಅಧಿಕಾರಿಗಳು ಸಿಬ್ಬಂದಿಗಳು ಹೊತ್ತಲ್ಲದ ಹೊತ್ತಲ್ಲಿ ಕಛೇರಿಗೆ ಬೀಗ ಹಾಕುತ್ತಾರೆ ಎಂದರೆ ಇವರಿಗೆ ಎಷ್ಟು ಉದ್ದಟತನ ಇರಬೇಕು ನೀವೆ ಹೇಳಿ ಇನ್ನಾದರು ಈ ಮಿನುಗಾರಿಕಾ ಇಲಾಖೆಯ ಮೆಲ್ದರ್ಜೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೋಳ್ಳುತ್ತದೆಯೋ ಎಂದು ಕಾದು ನೋಡಬೇಕಾಗಿದೆ.