ಭಟ್ಕಳ : ಕೆನರಾ ವೆಲಫೆರ್ ಟ್ರಸ್ಟಿನ ಜನತಾ ಸಂಯುಕ್ತ ಪ.ಪೂ.ಕಾಲೇಜು, ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಸಾಮಾಜಿಕ ಚಿಂತಕ, ಶೈಕ್ಷಣಿಕ ಕ್ರಾಂತಿಕಾರ, ರೈತ ಹೋರಾಟಗಾರ, ಜನಪರ ರಾಜಕಾರಣದ ಮೂಲಕ ಹೆಸರಾದ ಚುಟುಕು ಬ್ರಹ್ಮ ಡಾ.ದಿನಕರ ದೇಸಾಯಿಯವರ ಜನ್ಮದಿನದ ಅಂಗವಾಗಿ “ಸಂಸ್ಥಾಪಕರ ದಿನಾಚರಣೆ ದಿನಕರ ದೇಸಾಯಿ ಸಂಸ್ಮರಣೆ” ಹಾಗೂ ವಿದ್ಯಾರ್ಥಿ ಸಮೂಹಕ್ಕೆ ಆಯೋಜಿಸಿದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮವು ಸೆ.೧೦ನೇ ತಾರೀಖಿನ ಶನಿವಾರ ಮುಂಜಾನೆ ೧೦.೪೫ಕ್ಕೆ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ನಡೆಯಲಿದೆ.

RELATED ARTICLES  ಮತ್ತೆ ಉತ್ತರ ಕನ್ನಡದಲ್ಲಿ ಕೊರೋನಾ ರಣಕೇಕೆ.. ಹೆಚ್ಚಿದೆ ಪ್ರಕರಣಗಳ ಸಂಖ್ಯೆ

ಉದ್ಯಮಿ ಹಾಗೂ ಜನತಾ ವಿದ್ಯಾಲಯದ ಪೂರ್ವ ವಿದ್ಯಾರ್ಥಿ ಪರಿವಾರದ ಗೌರವಾಧ್ಯಕ್ಷ ಡಿ.ಜೆ.ಕಾಮತ್ ಉದ್ಘಾಟಕರಾಗಿ ಭಾಗವಹಿಸಲಿದ್ದು ಪ್ರಾಂಶುಪಾಲ ಅಮೃತ ರಾಮರಥ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಆಶಯ ನುಡಿಗಳನ್ನಾಡಲಿದ್ದು ಮುಖ್ಯ ಅತಿಥಿಗಳಾಗಿ ಸಾಹಿತಿ ಹಾಗೂ ಕಸಾಪ ಮಾಜಿ ಅಧ್ಯಕ್ಷ ಶಂಕರ ನಾಯ್ಕ ಮತ್ತು ಎನ್.ಐ.ಟಿ.ಕೆ. ಸುರತ್ಕಲ್‌ನ ಪ್ರಾಧ್ಯಾಪಕ ಜೋರ ಗೊಂಡ, ಬಹುಮಾನ ವಿತರಕರಾಗಿ ಸಾಹಿತಿ ಮಾನಾಸುತ ಶಂಭು ಹೆಗಡೆ, ಗೌರವ ಉಪಸ್ಥಿತರಾಗಿ ಜನತಾ ವಿದ್ಯಾಲಯದ ಮುಖ್ಯಾಧ್ಯಾಪಕಿ ಆಶಾ ಭಟ್ ಹಾಗೂ ಬಾಲಮಂದಿರದ ಮುಖ್ಯಾಧ್ಯಾಪಕಿ ಮಿತಾ ರಾಮರಥ ಇರಲಿದ್ದಾರೆ. ಸರ್ವರೂ ಕಾರ್ಯಕ್ರಮPದಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಕೋರಿದ್ದಾರೆ.

RELATED ARTICLES  ಕುಮಟಾಕ್ಕೆ ಆಗಮಿಸಿದ ಗೋವಾ ಸಿ.ಎಂ ಪರಿಕ್ಕರ್ .