ಅಂಕೋಲಾ: ಹಣತೆ ಸಾಹಿತ್ಯಕ ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ಇದರ ಅಂಕೋಲಾ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಅನುಮೋದನೆಯೊಂದಿಗೆ ಸಮಿತಿಯ ಯಾದಿಯನ್ನು ತಾಲೂಕಾಧ್ಯಕ್ಷ ಅಕ್ಷಯ ಶ್ರೀಪಾದ ನಾಯ್ಕ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಹಣತೆ ಅಂಕೋಲಾ ಘಟಕದ ಅಧ್ಯಕ್ಷರಾಗಿ ಪತ್ರಕರ್ತ ಅಕ್ಷಯ ಶ್ರೀಪಾದ ನಾಯ್ಕ, ಉಪಾಧ್ಯಕ್ಷರಾಗಿ ಅನಂತ ಕಟ್ಟಿಮನಿ, ಗೌರವ ಕಾರ್ಯದರ್ಶಿಗಳಾಗಿ ಮಾರುತಿ ಹರಿಕಂತ್ರ, ನಿಶಾಂತ ಆಗೇರ, ಗೌರವ ಕೋಶಾಧ್ಯಕ್ಷರಾಗಿ ನಾಗರಾಜ ಜಾಂಬ್ಳೇಕರ ನೇಮಕವಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಿಲೇಶ ನಾಯ್ಕ, ಅಕ್ಷಯ ಆಗೇರ, ದೀಪಾ ನಾಯ್ಕ, ವಿಘ್ನೇಶ್ ನಾಯ್ಕ, ರವಿರಾಜ ಗೌಡ, ಶೀತಲ್ ಆಗೇರ, ಅಭಿಷೇಕ ನಾಯ್ಕ ನೇಮಕಗೊಂಡಿದ್ದಾರೆ.

RELATED ARTICLES  ಪ ಪೂ ಶ್ರೀ ಶ್ರೀ ವಿಜಯಸಿದ್ಧೇಶ್ವರ ಸ್ವಾಮೀಜಿಯವರಿಗೆ ಗೋಕರ್ಣ ಗೌರವ

ಹಣತೆ ಅಂಕೋಲಾ ಘಟಕ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಸಾಹಿತ್ಯ, ಸಂಸ್ಕೃತಿ, ಜಾನಪದ, ಆರೋಗ್ಯ ಶಿಬಿರ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ, ಕಂಪ್ಯೂಟರ್ ತರಬೇತಿ ಮುಂತಾದ ಜನಪರ ಚಟುವಟಿಕೆಗಳ ಮೂಲಕ ಸಮುದಾಯಕ್ಕೆ ಸ್ಪಂದಿಸಲು ಪ್ರಯತಿಸುತ್ತದೆ ಎಂದು ತಾಲೂಕಾಧ್ಯಕ್ಷ ಅಕ್ಷಯ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಕೊಡುಕೊಳ್ಳುವ ವಿಷಯದಲ್ಲಿ ಆತ್ಮೀಯತೆ ಹಾಗೂ ಪರಿಶುದ್ಧತೆ ಇರಬೇಕು: ಸ್ವರ್ಣವಲ್ಲೀ ಶ್ರೀ