ಕುಮಟಾ : ಇತ್ತೀಚೆಗೆ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು 33 ಸ್ಪರ್ಧೆಗಳಲ್ಲಿ ಭಾಗವಹಿಸಿ 31 ರಲ್ಲಿ ಬಹುಮಾನ ಪಡೆದು ಅಮೋಘ ಸಾಧನೆ ಮಾಡಿದ್ದಾರೆ. ಅದರಲ್ಲಿ 22 ಪ್ರಥಮ, 6 ದ್ವಿತೀಯ, ಮೂವರು ತೃತೀಯ ಸ್ಥಾನ ಪಡೆದು ಸಾಧನೆ ಮಾಡಿರುತ್ತಾರೆ.

ಕಿರಿಯರ ವಿಭಾಗದಲ್ಲಿ
ಕನ್ನಡ ಕಂಠಪಾಠ – ಆರವ ಮೋಹನ ಅಂಬಿಗ,
ಹಿಂದಿ ಕಂಠಪಾಠ – ಓಂಕಾರ ಸುಬ್ರಹ್ಮಣ್ಯ ಭಾಗ್ವತ್ ,
ಸಂಸ್ಕ್ರತ ಕಂಠಪಾಠ – ಹರ್ಷ ವಿನಯ ಚಿತ್ರಗಿಮಠ, ಉರ್ದು ಕಂಠಪಾಠ – ಧ್ರುವ ಗೋಯಲ್,
ಕೊಂಕಣಿ ಕಂಠಪಾಠ – ಮಹಾಲಸಾ ಡಿ ಪೈ, ಸಂಸ್ಕ್ರತ ಧಾರ್ಮಿಕ ಪಠಣ – ಕೀರ್ತಿ ಬಾಲಚಂದ್ರ ಭಟ್,
ಲಘು ಸಂಗೀತ – ಪುರಬ ಶ್ರೀನಿವಾಸ ನಾಯ್ಕ,
ಚಿತ್ರಕಲೆ – ರಿತ್ವಿಕಾ ಉಲ್ಲಾಸ ಪಟಗಾರ, ಅಭಿನಯ ಗೀತೆ – ಹರ್ಷಿಕಾ ಅನಿಲ ಮಡಿವಾಳ, ಕ್ಲೇಮಾಡಲಿಂಗ – ಹರ್ಷಿತ ಕಿರಣ ಗಾವಡಿ, ಭಕ್ತಿಗೀತೆ – ಧನುಷ ನಾಗಪ್ಪ ಗೌಡ, ಆಶುಭಾಷಣ – ಓಂಕಾರ ಸುಬ್ರಹ್ಮಣ್ಯ ಭಾಗ್ವತ್ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

ಕಿರಿಯರ ವಿಭಾಗದಲ್ಲಿ
ಇಂಗ್ಲೀಷ್ ಕಂಠಪಾಠ – ತನ್ಮಯ ಗಣಪತಿ ಪಟಗಾರ, ಕಥೆ ಹೇಳುವುದು – ಹರ್ಷಿಕಾ ಅನಿಲ ಮಡಿವಾಳ ದ್ವಿತೀಯ ಸ್ಥಾನ ಹಾಗೂ ಛದ್ಮವೇಷ – ಸಮೃದ್ಧಿ ಅಜಿತ ನಾಯಕ ತೃತೀಯ ಸ್ಥಾನ ಪಡೆದಿದ್ದಾರೆ.

RELATED ARTICLES  ಇಹ ಲೋಕ ತ್ಯಜಿಸಿದ 'ಬದುಕಲು ಕಲಿಯಿರಿ' ಕೃತಿ ಕರ್ತೃ ಸ್ವಾಮಿ ಜಗದಾತ್ಮನಂದಜೀ!

ಹಿರಿಯರ ವಿಭಾಗದಲ್ಲಿ
ಇಂಗ್ಲೀಷ್ ಕಂಠಪಾಠ – ಅನನ್ಯಾ ಶಿವರಾಂ ಭಟ್ಟ, ಹಿಂದಿ – ಪಲ್ಲವಿ ಶಾನಭಾಗ, ಸಂಸ್ಕ್ರತ – ಹಿಮಜಾ ವಿನಾಯಕ ಭಟ್ಟ
, ಮರಾಠಿ – ಕೃಪಾ ವಸಂತ ನಾಯ್ಕ, ಉರ್ದು – ವರ್ಷಾ ಚಿತ್ರಗಿ, ಕೊಂಕಣಿ – ಪನ್ನಗ ಶಾನಭಾಗ, ಸಂಸ್ಕ್ರತ ಧಾರ್ಮಿಕ ಪಠಣದಲ್ಲಿ – ಹಿಮಜಾ ವಿನಾಯಕ ಭಟ್ಟ, ಲಘು ಸಂಗೀತ : ಮನೋಜ ರಮೇಶ ಭಟ್ಟ, ಭಕ್ತಿಗೀತೆ – ಶ್ರೀಷ .ಎಸ್, ಆಶುಭಾಷಣ- ಶ್ರೇಯಾ ಶಿವರಾಮ ಹೆಗಡೆ ಪ್ರಥಮ ಸ್ಥಾನ ಪಡೆದಿದ್ದಾರೆ.

RELATED ARTICLES  60 ಅಡಿ ಆಳದ ಬಾವಿಯಲ್ಲಿ ಸಿಲುಕಿಕೊಂಡ ವ್ಯಕ್ತಿಯ ರಕ್ಷಣೆ

ಹಿರಿಯರ ವಿಭಾಗದಲ್ಲಿ ಕನ್ನಡ ಕಂಠಪಾಠ- ಅನನ್ಯಾ ಶಿವರಾಂ ಭಟ್ಟ, ಅಭಿನಯ ಗೀತೆ – ವೈಷ್ಣವಿ ಮಹೇಶ ಕಾಮತ, ಹಾಸ್ಯ – ರೋಹನ ಬಾಳೇರಿ, ಭಾಷಣ – ಶ್ರೇಯಾ ಶಿವರಾಮ ಹೆಗಡೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಥೆ ಹೇಳುವುದು – ತನಿಷ್ಕಾ ಮನೋಜ ಗುರವ, ಚಿತ್ರಕಲೆ – ಕಿಶನ ಪ್ರಭು ತೃತೀಯ ಸ್ಥಾನ ಪಡೆದಿದ್ದಾರೆ.

ಇವರ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಸುಜಾತಾ ನಾಯ್ಕ, ಶೈಕ್ಷಣಿಕ ಮಾರ್ಗದರ್ಶಕರಾದ ಬಿ.ಎಸ್ ಗೌಡ, ಸಲಹೆಗಾರರಾಗ ಆರ್.ಎಚ್ ದೇಶಭಂಡಾರಿ ಹಾಗೂ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ವಿಶ್ವಸ್ಥರು ಶುಭಾಶಯ ಕೋರಿದ್ದು ಮುಂದಿನ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.