ಯಲ್ಲಾಪುರ: ಹೊಲದಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿ ಕರಡಿ ದಾಳಿ ನಡೆಸಿ ಯುವಕನನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ತಾಲೂಕಿನ ಕಣ್ಣಿಗೇರಿಯ ಹತ್ತಿರದ ಜನಶೆಟ್ಟಿಕೊಪ್ಪದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ಯುವಕ ಸಂತೋಷ ಲಾರೆನ್ಸ್‌ ಸಿದ್ದಿ ಎಂದು ಗುರುತಿಸಲಾಗಿದೆ. ಈತನು ತನ್ನ ಹೊಲದಲ್ಲಿ ಕೆಲಸ ಮಡುತ್ತಿರುವಾಗ ಕರಡಿ ದಾಳಿ ನಡೆಸಿ, ಕಣ್ಣು, ಮುಖ, ತಲೆಗೆ ಪರಚಿ ಗಂಭೀರವಾಗಿ ಗಾಯಗೊಳಿಸಿದೆ ಎನ್ನಲಾಗಿದೆ.

RELATED ARTICLES  ರಂಗೇರುತ್ತಿದೆ ಚುನಾವಣಾ ಕಣ: ಅಬಕಾರಿ ಅಕ್ರಮ ತಡೆಯಲು ರಚನೆಯಾಯ್ತು ತಾಲೂಕಾವಾರು ಅಧಿಕಾರಿಗಳ ತಂಡ

ಗಾಯಾಳುವನ್ನು ಪಟ್ಟಣದ ಸರ್ಕಾರಿ
ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.