ಹಳಿಯಾಳ: ಅಕ್ರಮವಾಗಿ ಮರಳು ದಾಸ್ತಾನು ಮಾಡಿಟ್ಟಿರುವ ಘಟನೆ ತಾಲೂಕಿನ ವೈಜಗಾಂವ ಗ್ರಾಮದ ಡುಮಕರವಾಡಿ ಹೋಗುವ ರಸ್ತೆಯ ಪಕ್ಕದ ಅರಣ್ಯದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಕಾರವಾರ ಸಹಾಯಕ ಆಯುಕ್ತ ಜಯಲಕ್ಷ್ಮಿರಾಯಕೋಡ ನಿರ್ದೇಶನದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಕಾರವಾರ, ಗ್ರಾಮ ಪಂಚಾಯಿತಿ ಶಿಂಗರಗಾಂವ, ಅರಣ್ಯ ಇಲಾಖೆ ಜಗಲಪೇಟ
ಮತ್ತು ಜಿಲ್ಲಾ ಪಂಚಾಯಿತಿ ಇಂಜನಿಯರ್ ಇಲಾಖೆಯ ಅಧಿಕಾರಿಗಳ ತಂಡ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

RELATED ARTICLES  ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ : ಅಪರಿಚಿತ ಶವ ಕಂಡು ಭಯಗೊಂಡ ಜನತೆ.

ಅಂದಾಜು ಮೌಲ್ಯ 57 ಸಾವಿರದ ಸುಮಾರು 8 ಟಿಪ್ಪರ್ ಆಗುವಷ್ಟು (86 ಟನ್) ಮರಳನ್ನು ಜಪ್ತಮಾಡಲಾಗಿದ್ದು, ವಶಪಡಿಸಿಕೊಂಡ ಮರಳನ್ನು ತಾಲೂಕಿನ ಜಿಲ್ಲಾ ಪಂಚಾಯಿತಿ ಇಂಜನಿಯರ್ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಅಕ್ರಮವಾದ ಮರಳು ಜಪ್ತಿ ಮಾಡುವ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರವಾರದ ಜಯರಾಮ ನಾಯ್ಕ, ಜಿಲ್ಲಾ ಪಂಚಾಯತ ಇಂಜನಿಯರಿಂಗ್ ಇಲಾಖೆ
ಇಂಜಿನಿಯರ್ ಪ್ರವೀಣ, ರಾಮನಗರ ಪಿಎಸೈ ಲಕ್ಷಣ ಪೂಜಾರ, ಡಿಆರ್‌ಎಫ್‌ಓ ದೀಪಕ ಬಂದಗಿ, ಶಿಂಗರಗಾಂವ ಗ್ರಾ.ಪಂ ಪಿಡಿಓ ವೆಂಕಟೇಶ ಕಾಂಬಳೆ, ಕಂದಾಯ ಇಲಾಖೆಯ ಮಂಜುನಾಥ ಲಮಾಣಿ ಇದ್ದರು ಎಂದು ವರದಿಯಾಗಿದೆ.

RELATED ARTICLES  ಶಿರಸಿ- ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ: ಜನತೆಗೆ ಮೂಲ ಸೌಕರ್ಯದ ಭರವಸೆ