ಶಿರಸಿ: ಕಾರ್ಯಕ್ರಮಕ್ಕೆ ಮನೆಯ ಮಾಲೀಕರು ತೆರಳಿದ್ದ ಸಂದರ್ಭದಲ್ಲಿ ಮನೆಯ ಬೀಗ ಒಡೆದು ಕಪಾಟಿನಲ್ಲಿದ್ದ 2.55 ಲಕ್ಷ ರೂ. ಹಾಗೂ ಬಂಗಾರದ ಆಭರಣಗಳನ್ನು ಕಳ್ಳರು ಕದ್ದ ಘಟನೆ ಬನವಾಸಿಯಲ್ಲಿ ನಡೆದಿದೆ. ಮನೆಯ ಯಜಮಾನರು ಇಲ್ಲದೇ ಇರುವ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡ ಕದೀಮರು ಈ ಕೃತ್ಯಾಯಸಗಿದ್ದಾರೆ.

RELATED ARTICLES  ಸಮಾಜಕ್ಕೆ ಅಮೃತ ನೀಡುವ ಪಣ ತೊಡಿ: ಕಾರ್ಯಕರ್ತರಿಗೆ ರಾಘವೇಶ್ವರ ಶ್ರೀ ಸಲಹೆ

ಇಲ್ಲಿಯ ಖಲೀಲ ಅಬ್ದುಲ್ ಶೇಖ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಮಸೀದಿಯಲ್ಲಿ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಖಲೀಲ ಅವರು ಅಲ್ಲಿಗೆ ತೆರಳಿದ್ದರು. ಆದರೆ, ರಾತ್ರಿ ಅವರ ಮನೆಯೊಳಗೆ ಸಪ್ಪಳ ಆಗುತ್ತಿದ್ದುದನ್ನು ಕಂಡು ಪಕ್ಕದ ಮನೆ ವ್ಯಕ್ತಿ ಕರೆ ಮಾಡಿ ತಿಳಿಸಿದ್ದಾನೆ. ತಕ್ಷಣ ಖಲೀಲ ಮನೆಗೆ ವಾಪಸಾದರೂ, ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾನೆ.

RELATED ARTICLES  ಯಲ್ಲಾಪುರ ಸಮೀಪ ನಿಯಂತ್ರಣ ತಪ್ಪಿ ಬಸ್ ಪಲ್ಟಿ: ಹತ್ತಕ್ಕೂ ಹೆಚ್ಚು ಜನರಿಗೆ ಗಾಯ

ಕಪಾಟಿನಲ್ಲಿ ಇಟ್ಟಿದ್ದ ಮಕ್ಕಳ ಬಂಗಾರದ ಉಂಗುರ ಸಹ ಕಳ್ಳನ ಪಾಲಾಗಿದೆ. ಈ ಕುರಿತಂತೆ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.